ಕೇಂದ್ರ ಸಚಿವರ ಮನೆಗೆ ಕನ್ನ..! ಆರೋಪಿ ಅಂದರ್..

ಪಿಯೂಷ್ ಗೋಯಲ್ ಅವರ ಮುಂಬೈನ ಮನೆಯಲ್ಲಿ ಕಳ್ಳತನ ನಡೆದಿದೆ. ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಹಣಕಾಸು ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಇದಾಗಿದ್ದು, ಹಲವು ಇಮೇಲ್ ಖಾತೆಗಳಿಗೆ ಈ ದಾಖಲೆಯನ್ನು ಕಳುಹಿಸಿರೋದು ಗೊತ್ತಾಗಿದೆ. ಹೀಗಾಗಿ ದಾಖಲೆಗಳು ಲೀಕ್ ಆಗಿರೋ ಶಂಕೆ ಕೂಡ ವ್ಯಕ್ತವಾಗಿದೆ. ಕಳೆದ ತಿಂಗಳು ಪಿಯೂಷ್ ಗೋಯಲ್ ಮನೆಯಲ್ಲಿ ಕೆಲವೊಂದು ಚಿನ್ನ ಮತ್ತು ಹಿತ್ತಾಳೆ ವಸ್ತುಗಳು ಕಣ್ಮರೆಯಾಗಿದ್ದವು. ಇದರಿಂದ ಕಳ್ಳತನದ ಗುಟ್ಟು ಬಯಲಾಗಿತ್ತು. ಮುಂಬೈನ ಗಾಮ್ ದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 16ರಿಂದ 18ರ ನಡುವಿನ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 28 ವರ್ಷದ ವಿಷ್ಣು ಕುಮಾರ್ ಎಂದು ಗುರುತಿಸಲಾಗಿದೆ.

Contact Us for Advertisement

Leave a Reply