ಮೋದಿಯನ್ನ ಚೈನ್‌ ಹಾಕಿ ಕಟ್ಟಾಕ್ತೀವಿ: ಪಾಕ್‌ ಸೇನಾಧಿಕಾರಿ!

masthmagaa.com:

ಅಕ್ಕಿ, ಗೋಧಿ, ವಿದ್ಯುತ್‌ ಅಂತ ಮೂಲಭೂತ ಅವಶ್ಯಕತೆಗಳಿಗೂ ಪರದಾಡ್ತಿರೋ ಪಕ್ಕದ ಪಾಕ್‌ ಸೇನೆ ಅಧಿಕಾರಿಯೊಬ್ಬ ಭಾರತದ ಮೇಲೆ ದಾಳಿ ಮಾಡ್ತೀವಿ, ಮೋದಿಯನ್ನ ಚೈನ್‌ನಿಂದ ಕಟ್ಟಾಕ್ತೀನಿ ಅಂತ ಅಬ್ಬರಿಸಿದ್ದಾನೆ. “ಭಾರತದ ಮೇಲೆ ದಾಳಿ ಮಾಡಿ ಇಡೀ ದೇಶವನ್ನೇ ವಶ ಪಡಿಸ್ಕೋಬೇಕು. ಮೋದಿ ಸಾಬ್‌ರನ್ನ ಸರಪಳಿಯಿಂದ ಕಟ್ಟಾಕಿ ಬಂಧಿಸೋಕೆ ನಮ್ಮಷ್ಟು ಯಾರೂ ಆಸೆ ಪಡಲ್ಲ”. ಅಂತ ಪಾಕ್‌ ಆರ್ಮಿಯ ಉನ್ನತ ಅಧಿಕಾರಿಯೊಬ್ಬ ಜನರ ಗುಂಪೊದನ್ನ ಕುರಿತು ಹೇಳಿದ ಮಾತುಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ಲಾಗಿದೆ. ಅಧಿಕಾರಿಯ ಈ ಮಾತುಗಳಿಗೆ ಅಲ್ಲಿ ನೆರೆದಿದ್ದ ಜನ ಕೇಕೆ ಹಾಕಿ ಚಪ್ಪಾಳೆ ಹೊಡೆದಿದ್ದೇ ಹೊಡಿದಿದ್ದು. ಅಲ್ಲದೇ ಪಾಕಿಸ್ತಾನಿ ಸೇನೆಗೆ ಮಾತ್ರ ಆ ತಾಕತ್ತಿರೋದು. ಭಾರತದ ನಾಯಕರನ್ನ ಗುಲಾಮರನ್ನಾಗಿ ಮಾಡ್ಕೋತೀವಿ. ಅಲ್ಲದೇ ಪ್ಯಾಲಸ್ತೀನ್‌ ಜನರ ರಕ್ಷಣೆಗೆ ಆಕಾಶದಿಂದ ಅವತಾರ ಪುರುಷನೊಬ್ಬ ಸೈನ್ಯ ತಗೊಂಡು ಬರ್ತಾನೆ ಅಂತ ಈ ಅಧಿಕಾರಿ ಹೇಳಿದ್ದಾನೆ.

-masthmagaa.com

Contact Us for Advertisement

Leave a Reply