ಗಾಜಾ ಮೇಲಿನ ದಾಳಿ ತೀವ್ರ, ಇಸ್ರೇಲ್‌ ಮೇಲೆ ಕತಾರ್ ವಾಗ್ದಾಳಿ!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ದದಲ್ಲಿ ಮತ್ತೊಮ್ಮೆ ಕದನ ವಿರಾಮ ತರೋಕೆ ಯತ್ನಿಸಿ ರೋಸಿಹೋದ ಕತಾರ್‌ ರಾಜ ಶೇಕ್‌ ತಮೀಮ್‌ ಬಿನ್‌ ಹಮಾದ್‌ ಅಲ್-ತನಿ ಇಸ್ರೇಲ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇಸ್ರೇಲ್‌ 2 ತಿಂಗಳ ವರೆಗೆ ಈ ಹೇಯ ಕೃತ್ಯಗಳನ್ನ ಮಾಡೋಕೆ ಅವಕಾಶ ಕೊಟ್ಟಿರೋದು ಅಂತರಾಷ್ಟ್ರೀಯ ಕಮ್ಯುನಿಟಿಗೆ ನಾಚಿಕೆಗೇಡಿನ ವಿಚಾರ. ಅಮಾಯಕ ನಾಗರೀಕರನ್ನ ಇಸ್ರೇಲ್‌ ಉದ್ದೇಶಪೂರ್ವಕವಾಗಿ ಹತ್ಯೆ ಮಾಡ್ತಿದೆ… ನರಮೇಧ ಮಾಡ್ತಿದೆ. ದಿನದಿಂದ ದಿನಕ್ಕೆ ಗಾಜಾದಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ” ಅಂತ ಅಲ್‌ ತನಿ ಆರೋಪಿಸಿದ್ದಾರೆ. ಇತ್ತ ಗಾಜಾದಲ್ಲಿನ ನಾಗರಿಕರನ್ನ ಸ್ಥಳಾಂತರ ಆಗುವಂತೆ ಆದೇಶ ನೀಡಿ ಇಸ್ರೇಲ್‌ ಹಮಾಸ್‌ ಉಗ್ರರ ಮೇಲಿನ ದಾಳಿಯನ್ನ ತೀವ್ರಗೊಳಿಸಿದೆ. ಸದ್ಯ ಗಾಜಾದ 23 ಲಕ್ಷ ಜನರಲ್ಲಿ ಮುಕ್ಕಾಲು ಭಾಗ ಸ್ಥಳಾಂತಗೊಂಡಿದ್ದಾರೆ. ಅಮೆರಿಕ, ಕತಾರ್‌, ಈಜಿಪ್ಟ್‌ಗಳು ಮತ್ತೊಮ್ಮೆ ಕದನ ವಿರಾಮ ತರೋಕೆ ಪ್ರಯತ್ನ ಮಾಡ್ತಿದ್ರು, ಇಸ್ರೇಲ್‌ ಯಾರ್‌ ಮಾತನ್ನೂ ಕೇಳೋ ತರ ಕಾಣ್ತಿಲ್ಲ. ಇನ್ನು ಲೆಬನಾನ್‌ನ ಹೆಜ್ಬೊಲ್ಲಾ ಉಗ್ರರನ್ನ ಟಾರ್ಗೆಟ್‌ ಮಾಡಿ ನಡೆಸಿದ ವಾಯು ದಾಳಿಯಲ್ಲಿ ಲೆಬನಾನ್‌ ಸೈನಿಕರು ಗಾಯಗೊಡಿದ್ದಾರೆ. ಈ ಬಗ್ಗೆ ಇಸ್ರೇಲ್‌ ಲೆಬನಾನ್‌ ಬಳಿ ಕ್ಷಮೆ ಕೇಳಿ, ಘಟನೆ ಬಗ್ಗೆ ತನಿಖೆ ನಡೆಸೋದಾಗಿ ಹೇಳಿಕೆ ನೀಡಿದೆ. ಇನ್ನು ಹಮಾಸ್‌ ಪ್ರತಿದಾಳಿ ಕೂಡ ಜೋರಾಗಿದ್ದು, ಇಸ್ರೇಲ್‌ನ 24 ಮಿಲಿಟರಿ ವಾಹನಗಳನ್ನ ಡೆಸ್ಟ್ರಾಯ್‌ ಮಾಡ್ಲಾಗಿದೆ ಅಂತ ಹಮಾಸ್‌ ಹೇಳಿದೆ. ಅತ್ತ ವೆಸ್ಟ್‌ಬ್ಯಾಂಕ್‌ನ ಗಲಭೆಗಳಲ್ಲಿ ಇನ್ವಾಲ್ವ್‌ ಅಗಿದ್ದವರಿಗೆ ಅಮೆರಿಕ ವೀಸಾ ಕೊಡಲ್ಲ ಅಂತ ಸೆಕ್ರೆಟರಿ ಆಫ್‌ ಸ್ಟೇಟ್ಸ್‌ ಆಂಟನಿ ಬ್ಲಿಂಕನ್‌ ಹೇಳಿಕೆ ನೀಡಿದ್ದಾರೆ. ಇನ್ನು ಅಕ್ಟೋಬರ್‌ 7 ರಂದು ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿದ ವೇಳೆ ಅಣ್ವಸ್ತ್ರ ಕ್ಷಿಪಣಿಗಳನ್ನು ಸ್ಟೋರ್‌ ಮಾಡಲಾಗಿದ್ದ ಜಾಗಕ್ಕೆ ಹಾನಿಯಾಗಿತ್ತು, ಅದರ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿತ್ತು ಅನ್ನೋ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ. ಇಸ್ರೇಲ್‌ ಮಧ್ಯಭಾಗದಲ್ಲಿರೋ ಶ್ಡಾಟ್‌ ಮಿಚಾ ಬೇಸ್‌ನ ಜೆರಿಚೊ ಮಿಸೈಲ್ ಫೆಸಿಲಿಟಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply