15 ವರ್ಷದ ಹಿಂದಿನ ಲವ್..! ಯೋಧ ಮಾಡಿದ್ದೇನು..?

15 ವರ್ಷಗಳ ಹಿಂದೆ ಐಎಎಸ್ ಟ್ರೇನಿಂಗ್ ವೇಳೆ ವ್ಯಕ್ತಿಯೊಬ್ಬರಿಗೆ ಯುವತಿಯೊಬ್ಬರ ಮೇಲೆ ಲವ್ ಆಗಿತ್ತು. ಆದ್ರೆ ನಂತರದಲ್ಲಿ ಮದ್ವೆ ಆಗೋಕೆ ಸಾಧ್ಯವಾಗಲಿಲ್ಲ. ಈಗ ಆ ಮಹಿಳೆ ಐಎಎಸ್ ಅಧಿಕಾರಿಯಾಗಿದ್ದು, ಬೇರೆಯವರನ್ನು ಮದುವೆಯಾಗಿದ್ದಾರೆ. ಆದ್ರೆ ಸಿಐಎಸ್‍ಎಫ್ ಕಮಾಂಡೆಂಟ್ ಆಗಿರೋ ಹಳೆಯ ಒನ್ ವೇ ಲವ್ ಪ್ರೇಮಿ ಈಗ ಮಹಿಳೆ ವಿರುದ್ದ ಸೇಡಿಗೆ ಬಿದ್ದಿದ್ದಾನೆ. ಅದಕ್ಕಾಗಿಯೇ ಮಹಿಳೆಯ ಪತಿಗೆ ಡ್ರಗ್ಸ್ ಮೂಲಕ ಸಿಕ್ಕಿಬೀಳಿಸಲು ಯತ್ನಿಸಿದ್ದಾನೆ. ಆದ್ರೆ ಪ್ರಯತ್ನದಲ್ಲಿ ವಿಫಲರಾಗಿದ್ದು, ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಆತನ ಸ್ನೇಹಿತರೊಬ್ಬರನ್ನೂ ಬಂಧಿಸಿದ್ದಾರೆ.

ಇವರಿಬ್ಬರೂ ರಾಜಸ್ಥಾನದಲ್ಲಿರೋ ಮಹಿಳಾ ಐಎಎಸ್ ಅಧಿಕಾರಿ ಪತಿಯನ್ನು ಡಗ್ಸ್ ಕೇಸ್‍ನಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದರು ಅನ್ನೋದು ಬಯಲಾಗಿದೆ. ಸೀನಿಯರ್ ಕಮಾಂಡೆಂಟ್ 45 ವರ್ಷದ ರಂಜನ್ ಪ್ರತಾಪ್ ಸಿಂಹ ಮತ್ತು ಅವರ ಸ್ನೇಹಿತ 40 ವರ್ಷದ ನೀರಜ್ ಕುಮಾರ್ ಚೌವ್ಹಾಣ್ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಸಿಐಎಸ್‍ಎಫ್ ಗೆ ಇಂತಹ ಕಾರ್ ನಲ್ಲಿ ಚರಸ್ ಸಾಗಿಸಲಾಗುತ್ತಿದೆ ಅಂತ ಸಂದೇಶ ಬಂದಿತ್ತು. ಅದರಂತೆ ಅಧಿಕಾರಿಗಳು ಹೋಗಿ ಪರಿಶೀಲಿಸಿದಾಗ 550 ಗ್ರಾಂ ಚರಸ್ ಪತ್ತೆಯಾಗಿತ್ತು. ನಂತರ ಆ ಕಾರು ವಿದೇಶಾಂಗ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರದ್ದು ಎಂದು ತಿಳಿದು ಬಂದಿತ್ತು. ಪೊಲೀಸರು ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ನಂತರ ಸಿಸಿಟಿವಿ ಪರಿಶೀಲಿಸಿದಾಗ ಸಿಐಎಸ್‍ಎಫ್ ಅಧಿಕಾರಿಯ ಕೈಚಳಕ ಬೆಳಕಿಗೆ ಬಂದಿತ್ತು.

Contact Us for Advertisement

Leave a Reply