ಹೈದ್ರಾಬಾದ್‌ನಲ್ಲಿ 40% ಸರ್ಕಾರ ಅಂತ ಬೊಮ್ಮಾಯಿಯನ್ನ ಗುರಿಯಾಗಿಸಿಕೊಂಡು ಫಲಕ!

masthmagaa.com:

ಹೈದ್ರಾಬಾದ್‌ ಇಂದು ಎರಡು ರಾಜಕೀಯ ವೈರಿಗಳ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿತ್ತು.1948 ಸೆಪ್ಟೆಂಬರ್‌ 17 ರವರೆಗೂ ನಿಜಾಮರ ಕೈಯಲ್ಲಿದ್ದ ಹೈದ್ರಾಬಾದ್‌ ಆ ನಂತರ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯ್ತು.ಇದರ ನೆನಪಿಗಾಗಿ ಇಂದು ಕೇಂದ್ರ ಹಾಗೂ ತೆಲಂಗಾಣ ಸರ್ಕಾರಗಳು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿದ್ವು. ಕೇಂದ್ರ ಸರ್ಕಾರ ಈ ದಿನವನ್ನ ʻಹೈದ್ರಾಬಾದ್‌ ಲಿಬರೇಷನ್‌ ಡೇʼ ಅಂತ ಆಚರಣೆ ಮಾಡಿದ್ರೆ ಅತ್ತ ತೆಲಂಗಾಣ ಸರ್ಕಾರದಿಂದ ʻರಾಷ್ಟ್ರೀಯ ಏಕೀಕರಣ ದಿನʼ ಅಂತ ಸೆಲೆಬ್ರೇಟ್‌ ಮಾಡಲಾಗಿದೆ. ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಭಾಗಿಯಾಗಿದ್ರು. ಸ್ವಾತಂತ್ರ ಹೋರಾಟಗಾರರಿಗೆ ನಮನ ಸಲ್ಲಿಸಿ ಬಳಿಕ ದೊಡ್ಡ ರ್ಯಾಲಿ ಕೂಡ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್‌ ಶಾ ರಾಜ್ಯ ಸರ್ಕಾರದ ವೋಟ್‌ ಬ್ಯಾಂಕ್‌ ರಾಜಕಾರಣದಿಂದ ಲಿಬರೇಷನ್‌ ದಿನವನ್ನ ಇಷ್ಟು ದಿನ ಅಧಿಕೃತವಾಗಿ ಆಚರಣೆ ಮಾಡಿಲ್ಲ ಅಂತ ವಾಗ್ದಾಳಿ ಮಾಡಿದ್ರು. ಇನ್ನು ಈ ಭೇಟಿಯ ವೇಳೆ ಅಮಿತ್‌ ಶಾ ಅವರಿಗೆ ಭದ್ರತಾ ಲೋಪ ಕೂಡ ಆಗಿತ್ತು. ಅವರು ಹೋಗ್ತಿದ್ದ ದಾರಿಯಲ್ಲಿ ಅವರ ಕಾರಿನ ಮುಂದೆ ಇನ್ನೊಂದು ಕಾರು ಬಂದಿದ್ದು, ಅದು ತೆಲಂಗಾಣದಲ್ಲಿ ಆಡಳಿತರೂಢ TRS ಪಕ್ಷದವ ಚಾಲನೆ ಮಾಡ್ತಿದ್ದ ಕಾರು ಅಂತ ಹೇಳಲಾಗ್ತಿದೆ. ಕೂಡಲೇ ಭದ್ರತಾ ಪಡೆಗಳು ಆ ಕಾರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಅಮಿತ್‌ ಶಾ ರ್ಯಾಲಿ ಮಾಡ್ತಿದ್ದ ಕೆಲವೇ ಕಿಲೋಮೀಟರ್‌ ದೂರದಲ್ಲಿ ತೆಲಂಗಾಣ ಸರ್ಕಾರ ಕೂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಅಲ್ಲಿನ ಸಿಎಂ ಕೆ ಚಂದ್ರಶೇಖರ್‌ ರಾವ್‌ ಧಾರ್ಮಿಕ ಮತಾಂಧತೆ ಬೆಳೆದ್ರೆ ದೇಶವೇ ನಾಶವಾಗುತ್ತೆ.ಕೆಲವು ಶಕ್ತಿಗಳು ರಾಷ್ಟ್ರದಲ್ಲಿ ಜನರನ್ನ ಒಡೆದು ಕೋಮು ದ್ವೇಷ ಬಿತ್ತೋಕೆ ಪ್ರಯತ್ನ ಮಾಡ್ತಿವೆ ಅಂತ ಹೇಳಿದ್ರು. ಇನ್ನು ಅಮಿತ್‌ ಶಾ ನೇತೃತ್ವದಲ್ಲಿ ನಡೆಯುವ ಬಿಜೆಪಿ ನಾಯಕರ ಸಭೆಗಾಗಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹೈದ್ರಾಬಾದ್‌ಗೆ ಹೋಗ್ತಿದ್ದಾರೆ ಅಂತ ಮಾಹಿತಿ ಇದೆ. ಆದ್ರೆ ಈ ರೀತಿ ತೆಲಂಗಾಣಕ್ಕೆ ಹೋಗೋಕೆ ಮುನ್ನವೇ ಬೊಮ್ಮಾಯಿಯವರನ್ನ ಗುರಿಯಾಗಿಸಿಕೊಂಡು 40% ಸಿಎಂ ಅಂತ ಕರೆದು TRS ಪಕ್ಷ ವ್ಯಂಗ್ಯವಾಡಿದೆ. ತೆಲಂಗಾಣದ ಪೆರೇಡ್ ಮೈದಾನದಲ್ಲಿ 40% ಸಿಎಂಗೆ ವೆಲ್‌ಕಮ್‌ ಅಂತ ಬರೆದಿರೋ ಬೃಹತ್‌ ಫಲಕವನ್ನು ಅಳವಡಿಸಿ ಕಾಲೆಳೆದಿದೆ.

-masthmagaa.com

Contact Us for Advertisement

Leave a Reply