ವಿಮಾನ ದುರಂತ.. ಇಬ್ಬರ ದುರ್ಮರಣ..

ಮತ್ತೊಂದು ವಿಮಾನ ದುರಂತ ಸಂಭವಿಸಿದ್ದು ಇಬ್ಬರು ತರಬೇತಿನಿರತ ಪೈಲಟ್‍ಗಳು ಸಾವನ್ನಪ್ಪಿದ್ದಾರೆ. ತೆಲಂಗಾಣದ ಸುಲ್ತಾನ್ ಪುರದಲ್ಲಿ ಈ ಘಟನೆ ನಡೆದಿದೆ. ಪೈಲಟ್‍ಗಳನ್ನು ಪ್ರಕಾಶ್ ವಿಶಾಲ್ ಮತ್ತು ಅಮನ್ ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ. ಇವರು ಹೈದರಾಬಾದ್‍ನ ರಾಜೀವ್ ಗಾಂಧಿ ವಿಮಾನಯಾನ ಅಕಾಡೆಮಿಯ ವಿದ್ಯಾರ್ಥಿಗಳಾಗಿದ್ದರು. ತರಬೇತಿಯ ಭಾಗವಾಗಿ ಅವರು ನಿನ್ನೆ ಬೆಳಗ್ಗೆ ಬೇಗುಂಪೇಟ್ ವಿಮಾನ ನಿಲ್ದಾಣದಿಂದ ಸೆಸ್ನಾ ವಿಮಾನದಲ್ಲಿ ಟೇಕಾಫ್ ಆಗಿದ್ದರು. ಕಳೆದ ಶುಕ್ರವಾರವಷ್ಟೇ ಮಹಾರಾಷ್ಟ್ರದ ಶಿರಪುರದಲ್ಲಿ ತರಬೇತಿನಿರತ ವಿಮಾನವೊಂದು ಪತನಗೊಂಡಿತ್ತು.

Contact Us for Advertisement

Leave a Reply