ಮಾತಿನ ಭರದಲ್ಲಿ ಕಮೆಂಟ್‌: ಕೊಹ್ಲಿಗೆ ಸಾರಿ ಕೇಳಿದ ಎಬಿಡಿ!

masthmagaa.com:

ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಹಾಗೂ ಅವ್ರ ಕುಟುಂಬಕ್ಕೆ ಸೌತ್‌ ಆಫ್ರಿಕನ್‌ ದಿಗ್ಗಜ ಕ್ರಿಕೆಟರ್‌ ಅಬ್ರಾಹಂ ಡಿವಿಲಿಯರ್ಸ್‌ ಕ್ಷಮೆ ಕೇಳಿದ್ದಾರೆ. ಇತ್ತೀಚೆಗಷ್ಟೆ ಇಂಗ್ಲೆಂಡ್‌ ವಿರುದ್ದದ ಇನ್ನಳಿದ 3 ಟೆಸ್ಟ್‌ ಮ್ಯಾಚ್‌ಗಳಿಂದ ಕೊಹ್ಲಿ ವೈಯಕ್ತಿಕ ಕಾರಣ ಕೊಟ್ಟು ಹೊರಗುಳಿದಿದ್ರು. ಈ ಬಗ್ಗೆ ಬಿಸಿಸಿಐ ಕೂಡ ಸ್ಪಷ್ಟನೆ ಕೊಟ್ಟಿತ್ತು. ಆದ್ರೆ ಈ ಕುರಿತು ಡಿವಿಲಿಯರ್ಸ್‌ ಮಾತಿನ ಭರದಲ್ಲಿ ವಿರಾಟ್‌ರ ಪತ್ನಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಟೆಸ್ಟ್‌ನಿಂದ ಕೊಹ್ಲಿ ದೂರ ಉಳಿದಿದ್ದಾರೆ ಅಂತೇಳಿದ್ರು. ಇನ್ನು ಈ ಕಮೆಂಟ್‌ ಹಲವು ವಿವಾದಗಳಿಗೆ ಎಡೆಮಾಡಿ ಕೊಡ್ತಿದ್ದಂತೆ ಎಚ್ಚೆತ್ತ ಎಬಿಡಿ ನಾನು ಕೊಹ್ಲಿ ಟೆಸ್ಟ್‌ನಿಂದ ಯಾಕೆ ಹೊರಗುಳಿದಿದ್ದಾರೆ ಅನ್ನೊದು ಅವ್ರ ವೈಯಕ್ತಿಕ ವಿಚಾರ ಅಂತೇಳಿದ್ದಾರೆ. ಅಲ್ದೇ ಈ ಹಿಂದೆ ನಾನು ಕೊಹ್ಲಿ ಬಗ್ಗೆ ಸ್ವಲ್ಪ ಅಪಸ್ವರ ಅನ್ನೊ ತರ ಮಾತಾಡ್ದೆ. ಈ ವಿಚಾರವಾಗಿ ಕೊಹ್ಲಿ ಮತ್ತವರ ಕುಟುಂಬಕ್ಕೆ ನಾನು ಕ್ಷಮೆ ಕೇಳ್ತೆನೆ ಹಾಗೂ ಕೊಹ್ಲಿ ಮತ್ತೆ ರನ್‌ ಗಳಿಸೊದನ್ನ ನೋಡಲು ಬಯಸ್ತೇನೆ ಅಂತೇಳಿ ಎಬಿಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

-masthmagaa.com

Contact Us for Advertisement

Leave a Reply