ನನಗೆ ವಯಸ್ಸಾಗಿದೆ ಅಂತ ಬೇರೆಯವರಿಗಿಂತ ಚೆನ್ನಾಗಿ ನನಗೆ ಗೊತ್ತು: ಬೈಡನ್‌

masthmagaa.com:

ಅಮೆರಿಕ ಅಧ್ಯಕ್ಷರಲ್ಲೇ ಹಿರಿಯ ಅಂತ ಕರೆಸಿಕೊಂಡಿರುವ ಅಧ್ಯಕ್ಷ ಜೋ ಬೈಡನ್‌ ಅವ್ರಿಗೆ ವಯಸ್ಸಾಗಿರೋ ಕಾರಣ ಎರಡನೇ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಮಾತಾಡಿರುವ ಬೈಡನ್‌, ಬಹಳ ಜನ ನನ್ನ ವಯಸ್ಸಿನ ಮೇಲೆ ಫೋಕಸ್‌ ಮಾಡ್ತಿರೋ ಥರ ಕಾಣ್ತಿದೆ. ಆದ್ರೆ ಎಲ್ಲರಗಿಂತ ಜಾಸ್ತಿ ಅದರ ಬಗ್ಗೆ ನನಗೆ ಗೊತ್ತಿದೆ ಅನ್ನೋದನ್ನ ನಾನು ನಂಬ್ತೀನಿ ಅಂತ ಹೇಳಿದ್ದಾರೆ. ಇದೇ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ರಿಪಬ್ಲಿಕ್‌ ಸದಸ್ಯರು ಅಮೆರಿಕದ ಪ್ರಜಾಪ್ರಭುತ್ವವನ್ನ ನಾಶಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನಾನು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಅಂತ ಬೈಡನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply