ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದ ರಾಮ ರಹೀಮ್! ಕೇಕ್‌ ಕಟ್‌ ಮಾಡಿ ಸಂಭ್ರಮಾಚರಣೆ!

masthmagaa.com:

ಅತ್ಯಾಚಾರ ಪ್ರಕರಣದಡಿ ಜೈಲು ಶಿಕ್ಷೆ ಅನುಭವಿಸ್ತಿರೊ ರಾಮ ರಹೀಮ್‌ ಸಿಂಗ್‌ ಅನ್ನೋ ಜೀವಿ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದೆ. ಆದ್ರೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ರಾಮ್‌ ರಹೀಮ್‌ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಹಲವು ರಾಜ್ಯಗಳಲ್ಲಿ ರಹೀಮ್‌ನ ಹಿಂಬಾಲಕರು ಅಥವಾ ಸ್ವಯಸೇವಕರು ಆಯೋಜಿಸಿದ್ದ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಹರಿಯಾಣದಲ್ಲಿ ಬಾಬಾ ರಹೀಮ್‌ ಚಾಲನೆ ನೀಡಿದೆ. ಈ ವೇಳೆ ಹರಿಯಾಣದ ರಾಜ್ಯಸಭಾ ಸಂಸದ ಕ್ರಿಶನ್‌ ಲಾಲ್‌ ಪನ್ವಾರ್‌ ಹಾಗೂ ಮಾಜಿ ಸಚಿವ ಕ್ರಿಶನ್ ಕುಮಾರ್‌ ಬೇಡಿ ಸೇರಿದಂತೆ ಹರಿಯಾಣದ ಹಿರಿಯ ಬಿಜೆಪಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಂದ್ಹಾಗೆ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಈ ಬಾಬ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸ್ತಿದ್ದು ಈತನ ಕರ್ಮಕಾಂಡದ ಬಗ್ಗೆ ನಾವು ಈ ಹಿಂದೆಯೇ ಒಂದು ವಿಸ್ತೃತ ವರದಿ ಮಾಡಿದ್ದೀವಿ. ಈತನ ಮಾಯಾಜಾಲ ಹೇಗಿದೆ ಅನ್ನೋದ್ರ ವರದಿ ಕೊಟ್ಟಿದ್ದೀವಿ ನೀವು ಅದನ್ನ ಚೆಕ್‌ ಮಾಡಬೋದು.

-masthmagaa.com

Contact Us for Advertisement

Leave a Reply