ಏಲಿಯನ್​ಗಳ ಕುರಿತು ಮಹತ್ವದ ದಾಖಲೆಗಳು ಬಹಿರಂಗ

masthmagaa.com:

ಅಮೆರಿಕದ ಗುಪ್ತಚರ ಸಂಸ್ಥೆ ಎಫ್​ಬಿಐನ ಮಹತ್ವದ ದಾಖಲೆಗಳ ಬಗ್ಗೆ ದಿ ಸನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದ್ರಲ್ಲಿ ಪೈಲಟ್​​ಗಳು, ಪೊಲೀಸರು ಮತ್ತು ಸೈನಿಕರು ಅಪರಿಚಿತ ಹಾರುವ ತಟ್ಟೆ ಅಂದ್ರೆ ಯುಎಫ್​​ಒಗಳ ಬಗ್ಗೆ ಅಪರೂಪದ ಮಾಹಿತಿ ನೀಡಲಾಗಿದೆ. 27 ಸಾವಿರ ಕಿಲೋಮೀಟರ್​​ ವೇಗದಲ್ಲಿ ಹಾರೋ ಯುಎಫ್​​ಒ ಕ್ರ್ಯಾಶ್ ಆಗಿರೋ ಬಗ್ಗೆ, ಏಲಿಯನ್ಸ್​​​​ ಶರೀರದ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. 1940ರ ದಶಕದಲ್ಲಿ ಫೆಡರಲ್ ಅಧಿಕಾರಿಗಳು ನಡೆಸಿರುವ ತನಿಖೆ, 1947ರಲ್ಲಿ ರಾಸ್​​ವೆಲ್​​​ನಲ್ಲಿ ಯುಎಫ್​ಒ ಪತನದ ಬಗ್ಗೆ ಕೂಡ ಮಾಹಿತಿ ಇದೆ. ಇದೇ ರೀತಿಯ ಘಟನೆ ಸೋವಿಯತ್ ರಷ್ಯಾದಲ್ಲೂ ನಡೆದಿತ್ತು. ಇನ್ನು 1947ರಲ್ಲಿ ಅಮೆರಿಕದಾದ್ಯಂತ ನೂರಾರು ಯುಎಫ್​​ಒಗಳು ಪತ್ತೆಯಾಗಿದ್ವು. ಈ ಸಂಬಂಧ ನೂರಾರು ವರದಿಗಳನ್ನು ಕೂಡ ನೀಡಲಾಗಿತ್ತು. ಆದ್ರೆ ಅವುಗಳ ಪೈಕಿ ಹಲವು ದಾಖಲೆಗಳನ್ನು ನಾಶಪಡಿಸಲಾಗಿದೆ ಅಂತ ಕೂಡ ದಿ ಸನ್ ವರದಿ ಮಾಡಿದೆ. ಅಂದಹಾಗೆ ಕಳೆದ ಜೂನ್​ನಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಬಿಡುಗಡೆ ಮಾಡಿದ್ದ ವರದಿಯಲ್ಲೂ ಯುಎಫ್​​​ಒಗಳು ಏನು ಅನ್ನೋದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಅಂತ ಹೇಳಲಾಗಿತ್ತು.

-masthmagaa.com

Contact Us for Advertisement

Leave a Reply