masthmagaa.com:

ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಒನ್ಸ್ ಅಗೈನ್​ ಕೊರೋನಾ ಅನ್ನೋ ಮಹಾಮಾರಿ. ಹೌದು, ಕೊರೋನಾ ಹಾವಳಿ ಹಿನ್ನೆಲೆ ಈ ವರ್ಷದಲ್ಲಿ ನಿಗದಿಯಾಗಿದ್ದ ಹಲವು ಟೆಸ್ಟ್ ಸರಣಿಗಳು ನಡೆದಿಲ್ಲ. ಇಲ್ಲಿವರೆಗೆ ಟೆಸ್ಟ್ ಚಾಂಪಿಯನ್​ಶಿಪ್​ನ ಅರ್ಧದಷ್ಟು ಪಂದ್ಯಗಳು ಮಾತ್ರ ಮುಗಿದಿವೆ. ಹೀಗಾಗಿ ಸಮಯದ ಅಭಾವ ಇರುವುದರಿಂದ ಪಾಯಿಂಟ್ಸ್ ಸಿಸ್ಟಂನಲ್ಲಿ ಐಸಿಸಿ ಬದಲಾವಣೆ ತಂದಿದೆ. ಇದಕ್ಕಾಗಿ ಐಸಿಸಿ ಕ್ರಿಕೆಟ್‌ ಕಮಿಟಿ ಮುಖ್ಯಸ್ಥ ಅನಿಲ್‌ ಕುಂಬ್ಳೆ ಮತ್ತು ತಂಡ ನೀಡಿರುವ ನೂತನ ಸಲಹೆಗಳಿಗೆ ಐಸಿಸಿ ಓಕೆ ಎಂದಿದೆ. ಇದರಲ್ಲಿ ಶೇಕಡಾವಾರು ಲೆಕ್ಕಾಚಾರ ಕೂಡ ಒಂದು. ಈ ಲೆಕ್ಕಾಚಾರದ ಪ್ರಕಾರ ಆಸ್ಟ್ರೇಲಿಯಾ ತಂಡ 82.22ರ ಶೇಕಡವಾರು ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಟೀಂ‌ ಇಂಡಿಯಾ 75ರ ಶೇಕಡಾವಾರು ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಂತರದ ಸ್ಥಾನದಲ್ಲಿವೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯಲಿರುವ ತಂಡಗಳು 2021ರ ಜೂನ್​ನಲ್ಲಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಇದೊಂದು ರೀತಿ ಟೆಸ್ಟ್‌ ವಿಶ್ವಕಪ್‌ ಇದ್ದಂತೆ. ಹೊಸ ನಿಯಮದ ಪ್ರಕಾರ ಪೂರ್ಣಗೊಳ್ಳದ ಟೆಸ್ಟ್ ಪಂದ್ಯಗಳನ್ನ ಡ್ರಾ ಅಂತ ಪರಿಗಣಿಸಿ ಎರಡೂ ತಂಡಗಳಿಗೂ ಪಾಯಿಂಟ್ಸ್ ನೀಡಲಾಗುತ್ತದೆ.

-masthmagaa.com

Contact Us for Advertisement

Leave a Reply