2023ನೇ ಸಾಲಿನ ಏಷ್ಯಾಕಪ್‌ ಆತಿಥ್ಯ ವಹಿಸಲಿದೆ ಯುಎಇ! ಪಾಕಿಸ್ತಾನದ ಕೈ ಜಾರುತ್ತ ಅವಕಾಶ?

masthmagaa.com:

ಭಾರತ ಏನಾದ್ರೂ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಆಡೋಕೆ ಬಂದಿಲ್ಲ ಅಂದ್ರೆ ಪಾಕಿಸ್ತಾನ ಕೂಡ ಭಾರತದಲ್ಲಿ 2023ರಲ್ಲಿ ನಡೆಯೋ ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ ಅಂತ ಪಾಕಿಸ್ತಾನ ಹೇಳಿದೆ. ಬಹ್ರೇನ್‌ನಲ್ಲಿ ನಡೆದ ಸಭೆಯಲ್ಲಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಹಾಗೂ ಬಿಸಿಸಿಐ ಅಧ್ಯಕ್ಷ ಜಯ್‌ ಶಾ ಮತ್ತು ಪಿಸಿಬಿ ಮುಖ್ಯಸ್ಥ ನಜಮ್‌ ಸೇಥಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಾಕಿಸ್ತಾನಕ್ಕೆ ಭಾರತ ತೆರಳಲ್ಲ ಅನ್ನೋ ನಮ್ಮ ನಿಲುವು ಬದಲಾಗಲ್ಲ ಅಂತ ಜಯ್‌ ಶಾ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಏಷ್ಯಾಕಪ್‌ ಟೂರ್ನಿಯನ್ನ ಯುಎಇ ಅಥ್ವಾ ನ್ಯೂಟ್ರಲ್‌ ಸ್ಥಳದಲ್ಲಿ ನಡೆಸೋ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಮಾರ್ಚ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಸಭೆಯಲ್ಲಿ ಹೇಳಲಾಗಿದೆ. ಇದ್ರಿಂದ 2023ನೇ ಸಾಲಿನ ಏಷ್ಯಾಕಪ್‌ ಟೂರ್ನಿ ಆತಿಥ್ಯ ವಹಿಸಲಿರೋ ಪಾಕಿಸ್ತಾನಕ್ಕೆ ಹಿನ್ನೆಡೆಯಾಗಿದೆ.

-masthmagaa.com

Contact Us for Advertisement

Leave a Reply