masthmagaa.com:

ಭಾರತದಲ್ಲಿ ‘ಕೋವಿಶೀಲ್ಡ್​’ ಮತ್ತು ‘ಕೋವಾಕ್ಸಿನ್​’ ಲಸಿಕೆಗೆ ಅನುಮೋದನೆ ಕೊಡಲಾಗಿದೆ. ಆದ್ರೆ ಕೆಲ ರಾಜ್ಯಗಳು ಭಾರತ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್​ ಲಸಿಕೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಅನ್ನೋ ಬಗ್ಗೆ ವರದಿಯಾಗಿತ್ತು. ಹಾಗಿದ್ರೆ ಯಾವುದಾದ್ರೂ ರಾಜ್ಯ ಅಥವಾ ಯಾವುದಾದ್ರೂ ಫಲಾನುಭವಿ ನಮಗೆ ಇದೇ ಲಸಿಕೆ ಬೇಕು, ಆ ಲಸಿಕೆ ಬೇಡ ಅಂತೆಲ್ಲಾ ಡಿಮ್ಯಾಂಡ್ ಇಡಬಹುದಾ ಅನ್ನೋ ಪ್ರಶ್ನೆ ಮೂಡುತ್ತೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ‘ಹಲವು ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನ ಬಳಸಲಾಗ್ತಿದೆ. ಆ ದೇಶಗಳಲ್ಲಿ ಯಾವುದೇ ಫಲಾನುಭವಿಗೆ ಲಸಿಕೆಯನ್ನ ಆಯ್ಕೆ ಮಾಡುವ ಅವಕಾಶ ಕೊಟ್ಟಿಲ್ಲ’ ಅಂತ ಹೇಳಿದ್ದಾರೆ. ಈ ಮೂಲಕ ನಂಗೆ ಇದೇ ಲಸಿಕೆ ಬೇಕು, ಆ ಲಸಿಕೆಯಾದ್ರೆ ಬೇಡ ಅನ್ನೋ ಆಯ್ಕೆ ಯಾರಿಗೂ ಇರಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ, ದೇಶದಲ್ಲಿ ಅನುಮೋದನೆ ಕೊಟ್ಟಿರುವ ಎರಡೂ ಲಸಿಕೆಗಳು ಕೂಡ ಸುರಕ್ಷಿತವಾಗಿವೆ. ಅವುಗಳನ್ನ ಸಾವಿರಾರು ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗಿದೆ. ಅದರಿಂದ ಗಂಭೀರ ರೀತಿಯ ಅಡ್ಡ ಪರಿಣಾಮ ಕೂಡ ಕಾಣಿಸಿಲ್ಲ. ಹೀಗಾಗಿ ಲಸಿಕೆ ಬಗ್ಗೆ ಡೌಟ್ ಬೇಡ ಅಂತ ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರ ನಿನ್ನೆಯಷ್ಟೇ ಒಂದು ಡೋಸ್​ಗೆ 200 ರೂಪಾಯಿಯಂತೆ 1.10 ಕೋಟಿ ಕೋವಿಶೀಲ್ಡ್​ ಲಸಿಕೆಗೆ ಆರ್ಡರ್​ ಕೊಟ್ಟಿತ್ತು. ಹಾಗಾದ್ರೆ ಭಾರತ್ ಬಯೋಟೆಕ್​​ನ ಕೋವಾಕ್ಸಿನ್ ಲಸಿಕೆ ಕಥೆ ಏನು ಅನ್ನೋ ಪ್ರಶ್ನೆ ಮೂಡಿತ್ತು. ಅಂದ್ಹಾಗೆ ಕೇಂದ್ರ ಸರ್ಕಾರ 55 ಲಕ್ಷ ಕೋವಾಕ್ಸಿನ್ ಲಸಿಕೆಯ ಡೋಸ್​ಗಳನ್ನ ಪಡೆಯಲಿದೆ. ಇದರಲ್ಲಿ 16.50 ಲಕ್ಷ ಡೋಸ್​ಗಳನ್ನ ಕಂಪನಿ ಕೇಂದ್ರ ಸರ್ಕಾರಕ್ಕೆ ಫ್ರೀಯಾಗಿ ಕೊಡ್ತಿದೆ. ಉಳಿದ 38.50 ಲಕ್ಷ ಡೋಸ್​ಗಳನ್ನ ಒಂದು ಡೋಸ್​ಗೆ 295 ರೂಪಾಯಿ ಕೊಟ್ಟು ಸರ್ಕಾರ ಖರೀದಿಸಲಿದೆ. ಲಸಿಕೆಯ ಎರಡೂ ಡೋಸ್ ಹಾಕಿದ 14 ದಿನಗಳ ಬಳಿಕ ಅದು ಕೆಲಸ ಮಾಡಲಿದೆ. ಹೀಗಾಗಿ ಕೊರೋನಾ ನಿಯಂತ್ರಣಾ ನಿಯಮಗಳನ್ನ ಪಾಲಿಸಲೇಬೇಕು ಅಂತ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply