ಐಎಂಎ ಕೇಸಲ್ಲಿ ಭಾರಿ ಬೆಳವಣಿಗೆ…ಸಿಬಿಐನಿಂದ ಚಾರ್ಜ್‍ಶೀಟ್ ಸಲ್ಲಿಕೆ

ಐಎಂಎ ಬಹುಕೋಟಿ ವಂಚನೆ ಕೇಸ್‍ನಲ್ಲಿ ಸಿಬಿಐ ಅಧಿಕಾರಿಗಳು 1ನೇ ಸಿಸಿಹೆಚ್ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 15 ಮಂದಿ ಆರೋಪಿಗಳು ಮತ್ತು 5 ಕಂಪನಿಗಳ ಹೆಸರನ್ನು ಉಲ್ಲೇಖಿಸಿದೆ. ಅಲ್ಲದೆ ಮನ್ಸೂರ್ ಖಾನ್ ನಡೆಸುತ್ತಿದ್ದ ವ್ಯವಹಾರಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮನ್ಸೂರ್ ಖಾನ್ ಚಿನ್ನದ ಗಟ್ಟಿ ವ್ಯಾಪಾರ, ರಿಯಲ್ ಎಸ್ಟೇಟ್, ಆಸ್ಪತ್ರೆ, ಜ್ಯುವೆಲ್ಲರಿ ಸೇರಿದಂತೆ ಒಟ್ಟು 18 ಉದ್ಯಮಗಳನ್ನು ನಡೆಸುತ್ತಿದ್ದರು. 2006ರಿಂದ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 2019ರ ಮಾರ್ಚ್‍ನಿಂದ ಹೂಡಿಕೆದಾರರಿಗೆ ಹಣ ನೀಡದೇ ಉಂಡೆನಾಮ ತಿಕ್ಕಲಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಮಾಹಿತಿ ನೀಡಿದೆ.

ಸಾವಿರಾರು ಕೋಟಿ ವಂಚನೆಯ ಈ ಪ್ರಕರಣದಲ್ಲಿ ಹಣ ಕಳೆದುಕೊಂಡ ಹಲವರು ಜೀವ ಕೂಡ ಬಿಟ್ಟಿದ್ದರು. ಹಲವು ರಾಜಕಾರಣಿಗಳ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿತ್ತು.

Contact Us for Advertisement

Leave a Reply