ಅಣ್ವಸ್ತ್ರ ದಾಳಿ ಎಂದ ಇಮ್ರಾನ್‍ಗೆ ರಾಜ್‍ನಾಥ್ `ವ್ಯಂಗ್ಯ’..!

ನಿನ್ನೆಯಷ್ಟೇ ಅಣ್ವಸ್ತ್ರ ದಾಳಿ ಎಚ್ಚರಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ವಡಗಾಂವ್ ಹಡಗುಕಟ್ಟೆಯಲ್ಲಿ ಸ್ಕಾರ್ಪೀನ್ ಸರಣಿಯ 2ನೇ ಸಮರ ಜಲಾಂತರ್ಗಾಮಿ ಐಎನ್‍ಎಸ್ ಖಾಂಡೇರಿಯನ್ನು ನೌಕಾಪಡೆಯ ಸೇವೆಗೆ ನಿಯೋಜಿಸಿ ರಾಜನಾಥ್ ಸಿಂಗ್ ಮಾತನಾಡಿದ್ರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವದ ಎಲ್ಲಾ ರಾಷ್ಟ್ರಗಳ ಬಾಗಿಲು ತಟ್ಟುವ ಮೂಲಕ ವ್ಯಂಗ್ಯಚಿತ್ರಗಳಿಗೆ ವಿಷಯ ಸೃಷ್ಟಿಸುತ್ತಿದ್ದಾರೆ. ಮತ್ತೆ ಮುಂಬೈ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಹೊಂಚು ಹಾಕ್ತಿದ್ದಾರೆ. ಆದ್ರೆ ಅವರಿಗೆ ಅದು ಸಾಧ್ಯವಿಲ್ಲ. ನಮ್ಮ ನೌಕಾಪಡೆ ಸ್ಟ್ರಾಂಗ್ ಇದೆ. ಅದನ್ನ ಪಾಕಿಸ್ತಾನ ಅರ್ಥ ಮಾಡಿಕೊಳ್ಳಲಿ ಅಂದ್ರು.

Contact Us for Advertisement

Leave a Reply