ರಫೇಲ್ ಬಗ್ಗೆ ಪಾಕ್ ಮಂತ್ರಿ ವ್ಯಂಗ್ಯ..! ತಕ್ಕ ಏಟು ಕೊಟ್ಟ ಭಾರತೀಯರು..!

ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್‍ನಲ್ಲಿ ಆಯುಧ ಪೂಜೆ ಮಾಡಿದ್ದಕ್ಕೆ ಪಾಕಿಸ್ತಾನದ ಮಂತ್ರಿ ಫವಾದ್ ಚೌಧರಿ ವ್ಯಂಗ್ಯವಾಡಿದ್ದಾರೆ. ನಿಂಬೆ ಹಣ್ಣು, ಮೆಣಸು ಕಟ್ಟಿರುವ ವಿಮಾನದ ವ್ಯಂಗ್ಯಚಿತ್ರವನ್ನು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಭಾರತಕ್ಕೆ ರಫೇಲ್ ಹಸ್ತಾಂತರವಾದ ಬಳಿ ಅದು ಹೀಗೆ ಕಾಣಿಸುತ್ತೆ ಎಂದು ಬರೆಯಲಾಗಿದೆ.

ಇದ್ರ ಬೆನ್ನಲ್ಲೇ ಭಾರತೀಯ ಟ್ವೀಟ್ಟರ್ ಬಳಕೆದಾರರು ಪಾಕ್‍ನ ಮಂತ್ರಿ ಫವಾದ್ ಚೌಧರಿಗೆ ಹಿಗ್ಗಾಮುಗ್ಗ ಕ್ಲಾಸ್ ತಗೊಂಡಿದ್ದಾರೆ. ನೀನು ರಫೇಲ್ ಬಗ್ಗೆ ಮಾತನಾಡುತ್ತಿದ್ದೀಯ. ರಫೇಲ್ ವಿಮಾನದ ಒಂದು ಟಯರ್ ಖರೀದಿರಸೋ ಯೋಗ್ಯತೆ ನಿನಗೆ ಇದೆಯಾ ಎಂದು ಓರ್ವ ಪ್ರಶ್ನಿಸಿದ್ದಾರೆ. ಕೆಲವರಂತೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಗ್ರಾಫಿಕ್ಸ್ ಫೋಟೋ ಹಾಕಿ ನೀನು ನಮಗೆ ಪರಮಾಣು ಯುದ್ಧದ ಬೆದರಿಕೆ ಹಾಕುತ್ತೀಯಾ..? ಎಂದು ವ್ಯಂಗ್ಯವಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಪಾಕಿಸ್ತಾನ ಪದೇ ಪದೇ ಭಾರತದ ತಂಟೆಗೆ ಬರುತ್ತಿದೆ. ಜೊತೆಗೆ ಪ್ರತಿಯೊಂದು ವಿಚಾರದಲ್ಲೂ ಕಾಲು ಕೆದಕಿ ಬಂದು ಸರಿಯಾಗಿ ಏಟು ತಿಂದು ವಾಪಸ್ ಹೋಗುತ್ತಿದೆ.

Contact Us for Advertisement

Leave a Reply