ಉಗ್ರರಿಗೆ ತರಬೇತಿ ಕೊಟ್ಟಿದ್ದನ್ನು ಒಪ್ಪಿದ ಪಾಕ್..!

ಅಮೆರಿಕಾದ ಡಬ್ಲ್ಯೂಟಿಸಿ ಸೆಂಟರ್ ದಾಳಿಯ ರೂವಾರಿ ಅಲ್‍ಕೈದಾ ಉಗ್ರ ಸಂಘಟನೆ ಮತ್ತು ಇತರ ಉಗ್ರರಿಗೆ ತರಬೇತಿ ನೀಡುತ್ತಿರೋದನ್ನು ಪಾಕ್ ಒಪ್ಪಿಕೊಂಡಿದೆ. ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಕೌನ್ಸಿಲ್ ಆನ್ ಫಾರಿನ್ ರಿಲೇಷನ್‍ನಲ್ಲಿ ಮಾತನಾಡಿದ ಅವರು, 9/11ರ ದಾಳಿ ಬಳಿಕ ಅಫ್ಘಾನಿಸ್ತಾನದಲ್ಲಿ ಹೋರಾಡಲು ಅಮೆರಿಕಾಗೆ ಪಾಕಿಸ್ತಾನ ಸಹಾಯ ಮಾಡಿತ್ತು. ಇದೇ ಪಾಕಿಸ್ತಾನ ಮಾಡಿದ ದೊಡ್ಡ ತಪ್ಪು. ಇದರಿಂದ 200 ಬಿಲಿಯನ್ ಡಾಲರ್‍ನಷ್ಟು ಪಾಕಿಸ್ತಾನಕ್ಕೆ ನಷ್ಟವಾಯ್ತು ಅಂತ ಹೇಳಿದ್ದಾರೆ. 1980ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಅಫ್ಘಾನಿಸ್ಥಾನದಲ್ಲಿ ಪಾಕಿಸ್ತಾನ ಅಮೆರಿಕಾಗೆ ಸಹಾಯ ಮಾಡಿತ್ತು. ಸೋವಿಯತ್ ವಿರುದ್ಧ ಜಿಹಾದಿ ಮಾಡೋಕೆ ಉಗ್ರರಿಗೆ ನಮ್ಮ ಸೇನೆ ಮತ್ತು ಐಎಸ್‍ಐ ಟ್ರೈನಿಂಗ್ ಕೊಟ್ಟಿತ್ತು. ನಂತರ ಅದೇ ಉಗ್ರರು ಅಲ್ಕೈದಾ ಸಂಘಟನೆ ಸ್ಥಾಪನೆ ಮಾಡಿಕೊಂಡ್ರು ಅಂತ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವದ ಮುಂದೆ ಉಗ್ರರಿಗೆ ತರಬೇತಿ ನೀಡುತ್ತಿರೋದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.

Contact Us for Advertisement

Leave a Reply