ಆಕ್ಟಿವ್ ಕೇಸ್​​​​​​ನಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ನಂಬರ್ 1!

masthmagaa.com:

ಮತ್ತೊಂದ್ಕಡೆ ಕೊರೋನಾ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ನಂಬರ್ 1 ಪ್ಲೇಸ್ ಪಡ್ಕೊಂಡಿದೆ. ಈ ಮೂಲಕ ಹಲವು ತಿಂಗಳಿಂದ ಫಸ್ಟ್​ ಪ್ಲೇಸ್ ಆಕ್ರಮಿಸಿಕೊಂಡಿದ್ದ ಮಹಾರಾಷ್ಟ್ರವನ್ನು 2ನೇ ಪ್ಲೇಸ್​​​ಗೆ ತಳ್ಳಿದೆ. ರಾಜ್ಯದಲ್ಲೀಗ 5,92,182 ಸೋಂಕಿತರು ಚಿಕಿತ್ಸೆ ಪಡೀತಾ ಇದ್ದು, ಪಕ್ಕದ ಮಹಾರಾಷ್ಟ್ರದಲ್ಲಿ 5,46,129 ಮಂದಿ ಚಿಕಿತ್ಸೆ ಪಡೀತಾ ಇದ್ಧಾರೆ. ಇನ್ನು ಪಾಸಿಟಿವಿಟಿ ದರಕ್ಕೆ ಬಂದ್ರೆ ರಾಜ್ಯದ ಒಟ್ಟಾರೆ ಪಾಸಿಟಿವಿಟಿ ರೇಟ್​ 29 ಪರ್ಸೆಂಟ್ ಇದೆ. ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್‌ 10ಕ್ಕಿಂತ ಜಾಸ್ತಿ ಇದೆ. ಉತ್ತರ ಕನ್ನಡ, ಬಳ್ಳಾರಿ, ಹಾಸನ, ಮೈಸೂರು ಗಳಲ್ಲಿ ಪಾಸಿಟಿವಿಟಿ ರೇಟ್‌ ಶೇಕಡ 40ಕ್ಕಿಂತ ಜಾಸ್ತಿ ಇದೆ. ಶಿವಮೊಗ್ಗ, ತುಮಕೂರು, ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ರೇಟ್‌ 30ಕ್ಕಿಂತ ಜಾಸ್ತಿ ಇದೆ.

-masthmagaa.com

Contact Us for Advertisement

Leave a Reply