ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಮಲ ಕಿಲಕಿಲ

masthmagaa.com:

ಉಪಚುನಾವಣೆ ನಡೆದ ಮತ್ತೊಂದು ವಿಧಾನಸಭೆ ಕ್ಷೇತ್ರ ಬಸವಕಲ್ಯಾಣ.. ಇದು ಬೀದರ್​ನಲ್ಲಿದೆ. ಈ ಕ್ಷೇತ್ರ ಮೊದಲಿಗೆ ಜನತಾ ಪಕ್ಷ ಆಮೇಲೆ ಜೆಡಿಎಸ್​ನ ಭದ್ರಕೋಟೆಯಾಗಿತ್ತು. ಇಲ್ಲಿ ಜೆಡಿಎಸ್​​ನಿಂದ ಮಲ್ಲಿಕಾರ್ಜುನ ಖೂಬಾ 2 ಸಲ ನಿಂತು ವಿನ್ ಆಗಿದ್ರು. ಆದ್ರೆ ಕಳೆದ ವರ್ಷ ಬಿಜೆಪಿಗೆ ಬಂದ ಖೂಬಾ ಕಾಂಗ್ರೆಸ್​ನ ಬಿ ನಾರಾಯಣ ರಾವ್ ವಿರುದ್ಧ ಸೋತ್ರು. ಇಲ್ಲಿ 35 ವರ್ಷಗಳ ಬಳಿಕ ಈ ಕ್ಷೇತ್ರವನ್ನು ಕಾಂಗ್ರೆಸ್ ಬುಟ್ಟಿಗೆ ಹಾಕಿದ್ರು ನಾರಾಯಣ್ ರಾವ್.. ಆದ್ರೆ ಕಳೆದ ವರ್ಷ ನಾರಾಯಣ ರಾವ್ ಕೊರೋನಾಗೆ ಬಲಿಯಾಗಿದ್ದರಿಂದ ಉಪಚುನಾವಣೆಯಲ್ಲಿ ಅವರ ಪತ್ನಿ ಮಾಲಾ ಬಿ ನಾರಾಯಣ್​​​ಗೆ ಕಾಂಗ್ರೆಸ್ ಟಿಕೆಟ್ ಕೊಡ್ತು. ಅನುಕಂಪದ ಅಲೆ ವರ್ಕೌಟ್ ಆಗುತ್ತೆ ಅನ್ನೋ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಕಡೆ ಬಿಜೆಪಿ ಈ ಸಲ ಉಪಚುನಾವಣೆಯಲ್ಲಿ ಕಲಬುರಗಿ ಮೂಲದ ಶರಣು ಸಲಗರಗೆ ಟಿಕೆಟ್ ಕೊಡ್ತು. ಹೀಗಾಗಿ ಮಲ್ಲಿಕಾರ್ಜುನ ಖೂಬಾ ಬಂಡೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ಇಲ್ಲಿ ಶರಣು ಸಲಗರ ಮತ್ತು ಖೂಬಾ ಇಬ್ಬರೂ ಲಿಂಗಾಯತರಾಗಿರೋದ್ರಿಂದ ಮತ ವಿಭಜನೆಯ ಭಯವಾಗಿತ್ತು. ಹೀಗಾಗಿ ಖೂಬಾ ಮನವೊಲಿಕೆಗೆ ಬಿಜೆಪಿ ಯತ್ನಿಸಿತ್ತು. ಆದ್ರೆ ಬಿಜೆಪಿ ವರಿಷ್ಠರು ಮನೆಗೆ ಹೋದಾಗ ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ ಅಂತ ಬೋರ್ಡ್ ಹಾಕಿ, ಸೀನ್ ಕ್ರಿಯೇಟ್ ಮಾಡಿದ್ರು ಖೂಬಾ..

-masthmagaa.com

Contact Us for Advertisement

Leave a Reply