ಡೋಕ್ಲಾಮ್‌ ವಿವಾದದಲ್ಲಿ ಭಾರತಕ್ಕೆ ಬಿಗ್‌ ಶಾಕ್‌! ಭಾರತದಷ್ಟೇ ಚೀನಾಗೂ ಪಾಲಿದೆ ಎಂದ ಭೂತಾನ್‌ ಪ್ರಧಾನಿ!

masthmagaa.com:

ಡೊಕ್ಲಾಮ್‌ ವಿವಾದವನ್ನು ಪರಿಹರಿಸುವಲ್ಲಿ ಚೀನಾ-ಭಾರತ ಎರಡೂ ದೇಶಗಳು ಸಮಾನ ಹಕ್ಕು ಹೊಂದಿದೆ ಅಂತ ಭೂತಾನ್ ಪ್ರಧಾನಿ ಹೇಳಿದ್ದಾರೆ. ಬೆಲ್ಜಿಯಂ ಮೂಲದ ಸುದ್ದಿ ಮಾಧ್ಯಮ ಡೈಲಿ ಲಾ ಲಿಬ್ರೆಗೆ ಕೊಟ್ಟ ಸಂದರ್ಶನದಲ್ಲಿ ಭೂತಾನ್ ಪ್ರಧಾನಿ ಲೋಟೆ ಶೆರಿಂಗ್ ಈ ಹೇಳಿಕೆ ಕೊಟ್ಟಿದ್ದಾರೆ. ಡೋಕ್ಲಾಮ್ ಅನ್ನೋದು ಮೂರು ದೇಶಗಳ ಜಂಕ್ಷನ್‌ ಪಾಯಿಂಟ್. ಸಮಸ್ಯೆಯ ಪರಿಹಾರ ಕೇವಲ ಭೂತಾನ್‌ಗೆ ಬಿಟ್ಟದ್ದು ಅಲ್ಲ. ನಾವು ಮೂರು ಜನ ಇದ್ದೀವಿ. ಇದ್ರಲ್ಲಿ ದೊಡ್ಡ ಅಥವಾ ಚಿಕ್ಕ ದೇಶ ಅನ್ನೋದಿಲ್ಲ, ನಾವು ಚರ್ಚೆಗೆ ಸಿದ್ಧವಿದ್ದೇವೆ. ಈ ವಿವಾದ ಬಗೆಹರಿಸುವಲ್ಲಿ ಮೂರೂ ಕೂಡ ಪಾಲುದಾರ ದೇಶಗಳು ಅಂತ ಭೂತಾನ್‌ ಪ್ರಧಾನಿ ಹೇಳಿದ್ದಾರೆ.‌ ಅಂದ್ಹಾಗೆ ವಿವಾದಿತ ಡೊಕ್ಲಾಮ್‌ ಪ್ರದೇಶ ಭೌಗೋಳಿಕವಾಗಿ ಚೀನಾ ಹಾಗೂ ಭೂತಾನ್‌ನ ನಡುವೆನೇ ಇದೆ. ಹಾಗಿದ್ರೂ ಕೂಡ ಭಾರತಕ್ಕೆ ಈ ವಿಚಾರದಲ್ಲಿ ಇಂಟ್ರೆಸ್ಟ್‌ ಯಾಕೆ ಅಂದ್ರೆ ಈ ಡೊಕ್ಲಾಮ್‌ ಪ್ರದೇಶ ಭಾರತಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಚೀನಾ ಅಲ್ಲಿ ಯಾವುದೇ ಹೆಜ್ಜೆ ಇಟ್ರೂ ಕೂಡ ಅದು ಭಾರತದ ಪಾಲಿಗೆ ತುಂಬಾ ಚಿಂತೆ ಮಾಡುವ ವಿಚಾರ. ಡೊಕ್ಲಾಮ್‌ನಲ್ಲಿ ಚೀನಾ ಏನಾದ್ರೂ ಸೇನಾ ನಿಯೋಜನೆ ಮಾಡಿದ್ರೂ ಕೂಡ ನಾಳೆ ಒಂದ್ವೇಳೆ ಯುದ್ದ ಆದ್ರೆ ಈಶಾನ್ಯ ರಾಜ್ಯಗಳನ್ನ ಅವರು ಈಸಿಯಾಗಿ ಟಾರ್ಗೆಟ್‌ ಮಾಡೋಕೆ ಅವಕಾಶ ಇದೆ. ಒಟ್ಟಾರೆಯಾಗಿ ಡೊಕ್ಲಾಮ್‌ ಭಾರತಕ್ಕೆ ಅತ್ಯಂತ ಇಂಪಾರ್ಟೆಂಟ್‌ ಸ್ಟಾಟಜಿಕ್‌ ಪಾಯಿಂಟ್.‌ ಹೀಗಾಗಿನೇ ಭಾರತ ಡೊಕ್ಲಾಮ್‌ ವಿಚಾರದಲ್ಲಿ ಭೂತಾನ್‌ ಪರವಾಗಿ ನಿಲ್ಲುತ್ತೆ. ಡೋಕ್ಲಾಮ್‌ನ ಸಂಪೂರ್ಣ ಪ್ರದೇಶ ಭೂತಾನ್‌ಗೆ ಸೇರಿದ್ದು, ಇದ್ರಲ್ಲಿ ಮಾತನಾಡುವ ಹಕ್ಕು ಕೂಡ ಚೀನಾಗೆ ಇಲ್ಲ ಅಂತ ಭಾರತ ಹೇಳ್ತಾ ಬಂದಿದೆ. ಭೂತಾನ್‌ ಪರವಾಗಿ ಭಾರತದ ಸೈನಿಕರು ಚೀನಾ ವಿರುದ್ದ 2017ರಲ್ಲಿ ಗಡಿಯಲ್ಲಿ ಹೊಡೆದಾಡಿಕೊಂಡಿದ್ರು. ಅಷ್ಟೆ ಅಲ್ಲ ಭೂತಾನ್‌ನ, ಅದ್ರಲ್ಲೂ ಡೊಕ್ಲಾಮ್‌ ಭಾಗದ ಕೆಲವೊಂದು ಪ್ರದೇಶಗಳನ್ನ ಚೀನಾ ಅಕ್ರಮವಾಗಿ ತನಗೆ ಸೇರಿಸಿಕೊಂಡಿದೆ ಅಂತ ಭಾರತ ಪ್ರತಿಪಾದಿಸ್ತಾ ಬಂದಿವೆ. ಈ ನಡುವೆಯೇ ಈಗ ಭೂತಾನ್‌ ಪ್ರಧಾನಿ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

-masthmagaa.com

Contact Us for Advertisement

Leave a Reply