ಮಸ್ಕಿಯಲ್ಲಿ ಮಕಾಡೆ ಮಲಗಿದ ಬಿಜೆಪಿ : ಕೈ ಮೇಲು ಗೈ

masthmagaa.com:

ಇದು 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಹುಟ್ಟಿಕೊಂಡ ಕ್ಷೇತ್ರ.. ಇದು ರಾಯಚೂರಿನಲ್ಲಿದೆ. 3 ಸಲ ಚುನಾವಣೆ ನಡೆದಿದ್ದು, ಮೂರೂ ಬಾರಿ ಪ್ರತಾಪ್ ಗೌಡ ಪಾಟೀಲ್​​ ಗೆಲುವು ದಾಖಲಿಸಿದ್ರು. 2008ರಲ್ಲಿ ಬಿಜೆಪಿಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ, 2013ರಲ್ಲಿ ಕಾಂಗ್ರೆಸ್​​​ಗೆ ಬಂದಿದ್ರು. 2018ರಲ್ಲಿ ಮತ್ತೆ ಕಾಂಗ್ರೆಸ್​​ನಿಂದ ಕಣಕ್ಕಿಳಿದಿದ್ದ ಇವರು, 213 ಮತಗಳ ಅಂತರದಲ್ಲಿ ಗೆದ್ದಿದ್ರು. ನಂತ್ರ ಮತ್ತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ರು. ಉಪಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿದಿದ್ರು. ಅದೇ 2018ರ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಲ್ಲಿ ಸೋತಿದ್ದ ಬಿಜೆಪಿಯ ಬಸವನಗೌಡ ತುರ್ವಿಹಾಳ್​​​ಗೆ ಬೇಜಾರಾಯ್ತು. ಹೀಗಾಗಿ ಅವರು ಕಾಂಗ್ರೆಸ್​​ಗೆ ಹೋಗಿ, ಕಣಕ್ಕಿಳಿದ್ರು. ಇಲ್ಲಿ ನಾಯಕ ಮತ್ತು ಲಿಂಗಾಯತ ಸಮುದಾಯದ ಮತಗಳು ಪ್ರಮುಖವಾಗಿದ್ದು, ಸಿಎಂ ಯಡಿಯೂಪರಪ್ಪ ಪುತ್ರ ವಿಜಯೇಂದ್ರ ಮತ್ತು ರಾಮುಲುರನ್ನು ಪ್ರಚಾರ ಕಣಕ್ಕೆ ಇಳಿಸಿತ್ತು ಬಿಜೆಪಿ.. ಆದ್ರೂ ಕೂಡ ಪ್ರತಾಪ್ ಗೌಡರ ಪಕ್ಷಾಂತರ ಜನರಿಗೆ ಇಷ್ಟವಾಗಿಲ್ಲ ಅನ್ಸುತ್ತೆ.. ಹೀಗಾಗಿ ಈ ಸಲ ಕಾಂಗ್ರೆಸ್​​ನ ಬಸವನಗೌಡಗೆ ಮಣೆ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply