ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆಗಿದ್ದ ಗಡುವು ವಿಸ್ತರಣೆ..!

masthmagaa.com:

ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಸ್ವಲ್ಪ ನೆಮ್ಮದಿ ನೀಡಿದೆ. 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಡಿಸೆಂಬರ್ 31ರವರೆಗೂ ವಿಸ್ತರಿಸಿದೆ. ಕೊರೋನಾ ಹಾವಳಿಯಿಂದಾಗಿ ಐಟಿಆರ್ ಸಲ್ಲಿಸಲು ಇದ್ದ ಗಡುವನ್ನು ಎರಡೆರಡು ಬಾರಿ ವಿಸ್ತರಣೆ ಮಾಡಿದಂತಾಗಿದೆ. ಈ ಹಿಂದೆ 2019-20ನೇ ಸಾಲಿನ ಐಟಿಆರ್ ಸಲ್ಲಿಕೆಯ ದಿನವನ್ನು ಜುಲೈ 31ರಿಂದ ನವೆಂಬರ್ 30ರವರೆಗೆ ವಿಸ್ತರಿಸಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ತೆರಿಗೆದಾರರಿಗೆ ಇನ್ನಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ.

-masthmagaa.com

Contact Us for Advertisement

Leave a Reply