ಬಾಲಾಕೋಟ್‍ನಲ್ಲಿ ಮತ್ತೆ 500 ಉಗ್ರರು..! ಮತ್ತೆ ಏರ್ ಸ್ಟ್ರೈಕ್..?

ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತ ಏರ್‍ಸ್ಟ್ರೈಕ್ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ವೇಳೆ ಬಾಲಾಕೋಟ್‍ನಲ್ಲಿದ್ದ ಉಗ್ರರ ನೆಲೆಗಳನ್ನು ಉಡೀಸ್ ಮಾಡಿ, ಭಾರತೀಯ ವಾಯುಸೇನೆ ಪರಾಕ್ರಮ ಮೆರೆದಿತ್ತು. ಆದ್ರೆ ಈಗ ಪುನಃ ಬಾಲಾಕೋಟ್‍ನಲ್ಲಿ 500 ಮಂದಿ ಉಗ್ರರು ಸಕ್ರಿಯರಾಗಿದ್ದಾರೆ ಅಂತ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಮಾನತಾಡಿದ ಅವರು, ಬಾಲಾಕೋಟ್‍ನಲ್ಲಿ ಕಳೆದ 8 ತಿಂಗಳಲ್ಲಿ ಉಗ್ರರು ಮತ್ತೆ ಸಕ್ರಿಯರಾಗಿದ್ದಾರೆ. ಐನೂರಕ್ಕೂ ಹೆಚ್ಚು ಉಗ್ರರು ಗಡಿ ನಿಯಂತ್ರಣ ರೇಖೆ ಬಳಿ ಅಡಗಿದ್ದು, ಗಡಿ ನುಸುಳಲು ಸಿದ್ಧರಾಗಿದ್ದಾರೆ ಅಂದ್ರು. ಈ ಬಾರಿಯೂ ಏರ್ ಸ್ಟ್ರೈಕ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಪುನಃ ಏರ್ ಸ್ಟ್ರೈಕ್ ಯಾಕೆ ಮಾಡಬೇಕು..? ನಾವು ಮುಂದೆ ಯಾಕೆ ಹೋಗಬಾರದು..? ಗಡಿಯಲ್ಲಿ ಸೇನೆ ಸಿದ್ಧವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ನಿಯೋಜಿಸಲಾಗಿದೆ ಅಂದ್ರು.

ಉಗ್ರರನ್ನು ಗಡಿ ನುಸುಳಿಸಲು ಪಾಕ್ ಸೈನಿಕರ ಕದನ ವಿರಾಮ ಉಲ್ಲಂಘಿಸುತ್ತಾರೆ. ಆದ್ರೆ ಇದನ್ನು ಹೇಗೆ ಎದುರಿಸಬೇಕು, ಹೇಗೆ ಕಾರ್ಯಾಚರಣೆ ನಡೆಸಬೇಕೆಂದು ಭಾರತೀಯ ಸೇನೆಗೆ ಗೊತ್ತು ಅಂತ ಹೇಳಿದ್ರು.

Contact Us for Advertisement

Leave a Reply