‘ವಾಟ್ಸಾಪ್​ ಪ್ರೈವಸಿ ಪಾಲಿಸಿ’ಗೆ ಭಾರತ ವಿರೋಧ! ವಾಪಸ್ ಪಡೆಯಲು ಸೂಚನೆ!

masthmagaa.com:

ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋ ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿಯನ್ನ ವಾಪಸ್ ಪಡೆಯುವಂತೆ ಅಥವಾ ವಿತ್​ಡ್ರಾ ಮಾಡುವಂತೆ ಕೇಂದ್ರ ಸರ್ಕಾರ ವಾಟ್ಸಾಪ್​ಗೆ ಹೇಳಿದೆ. ಈ ಸಂಬಂಧ ವಾಟ್ಸಾಪ್​ನ ಗ್ಲೋಬಲ್ ಸಿಇಒ ವಿಲ್ ಕ್ಯಾಚ್​​ಕಾರ್ಟ್​ಗೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಪತ್ರ ಬರೆದಿದೆ. ಈ ಪತ್ರದಲ್ಲಿ ವಾಟ್ಸಾಪ್​ನ ‘All-or-Nothing’ ಅಪ್ರೋಚ್​ಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಅಂದ್ರೆ ಹೊಸ ಪ್ರೈವಸಿ ಪಾಲಿಸಿ ಪ್ರಕಾರ ವಾಟ್ಸಾಪ್​ ತನ್ನ ಬಳಕೆದಾರರ ಡೇಟಾವನ್ನ ಫೇಸ್​ಬುಕ್​ ಒಡೆತನದ ಇತರೆ ಕಂಪನಿಗಳ ಜೊತೆ ಇಂಟಿಗ್ರೇಟ್ ಮಾಡಲು ಅನುಮತಿ ಕೇಳ್ತಿದೆ. ಇದಕ್ಕೆ ಅಕ್ಸೆಪ್ಟ್ ಕೊಡಲೇಬೇಕು. ಅಕ್ಸೆಪ್ಟ್​ ಕೊಡದೇ ಇರಲು ಆಪ್ಷನ್ನೇ ಇಲ್ಲ. ಹಾಗೆ ಮಾಡಿಬಿಟ್ಟಿದೆ ವಾಟ್ಸಾಪ್​. ಇದನ್ನ ಕೇಂದ್ರ ಸರ್ಕಾರ ವಿರೋಧಿಸಿದೆ. ಇನ್ನು ಹೆಚ್ಚು ವಾಟ್ಸಾಪ್​ ಬಳಕೆದಾರರನ್ನ ಹೊಂದಿರುವ ಭಾರತಕ್ಕೊಂದು ಪ್ರೈವಸಿ ಪಾಲಿಸಿ, ಯುರೋಪಿಯನ್​ ಯೂನಿಯನ್​ಗೊಂದು ಪ್ರೈವಸಿ ಪಾಲಿಸಿ ಮಾಡಿರೋದನ್ನೂ ಸರ್ಕಾರ ವಿರೋಧಿಸಿದೆ. ಪರ್ಸನಲ್ ಡೇಟಾ ಪ್ರೊಟೆಕ್ಷನ್​ ಬಿಲ್ ಅನ್ನು ಸಂಸತ್​ ಪರಿಗಣಿಸಿರುವ ಈ ಸಂದರ್ಭದಲ್ಲಿ ಪ್ರೈವಸಿ ಪಾಲಿಸಿಯಲ್ಲಿ ಚೇಂಜಸ್ ಮಾಡಿದ್ದೇಕೆ ಅಂತ ಒಟ್ಟು 18 ಪ್ರಶ್ನೆಗಳನ್ನ ಕೇಳಿದೆ ಅಂತ ಮೂಲಗಳು ತಿಳಿಸಿವೆ. ಪರ್ಸನಲ್ ಡೇಟಾ ಪ್ರೊಟೆಕ್ಷನ್​ ಬಿಲ್​ ಪ್ರಕಾರ ಯಾವುದೇ ಕಂಪನಿ ತನ್ನ ಬಳಕೆದಾರರ ಡೇಟಾವನ್ನ ಕೆಲವೇ ಕೆಲವು ಉದ್ದೇಶಕ್ಕೆ ಮಾತ್ರ ಬಳಸಬಹುದು. ಒಂದ್ವೇಳೆ ಈ ಬಿಲ್ ಜಾರಿಗೆ ಬಂದ್ರೆ ವಾಟ್ಸಾಪ್​ಗೆ ಸಮಸ್ಯೆ ಆಗುತ್ತೆ.

-masthmagaa.com

Contact Us for Advertisement

Leave a Reply