ಅಶ್ವಿನ್​-ಅಕ್ಷರ್ ಮೋಡಿ: ಭಾರತಕ್ಕೆ 317 ರನ್​ ಭರ್ಜರಿ ಗೆಲುವು

masthmagaa.com:

ಭಾರತ-ಇಂಗ್ಲೆಂಡ್​ ನಡುವೆ ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ 317 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್​ ಸರಣಿಯನ್ನ 1-1 ಸಮಬಲ ಮಾಡಿಕೊಂಡಿದೆ. ಇಷ್ಟೇ ಅಲ್ಲ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ಸ್​ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಈಗ 2ನೇ ಸ್ಥಾನಕ್ಕೆ ಜಿಗಿದಿದೆ. ಗೆಲ್ಲಲು 482 ರನ್​ಗಳ ಬೃಹತ್ ಟಾರ್ಗೆಟ್​ ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 164 ರನ್​ಗೆ ಆಲೌಟ್​ ಆಯ್ತು. ಭಾರತ ಪರ ಸ್ಪಿನ್ನರ್​ ಅಕ್ಷರ್ ಪಟೇಲ್ 5 ವಿಕೆಟ್​ ಪಡೆದು ಮಿಂಚಿದ್ರೆ, ಅಶ್ವಿನ್ 3 ವಿಕೆಟ್ ಕಬಳಿಸಿದ್ರು. ಭಾರತದ ಗೆಲುವಿನಲ್ಲಿ ಅಶ್ವಿನ್ ಮತ್ತು ಅಕ್ಷರ್​ ಪಟೇಲ್​ ಪ್ರಮುಖ ಪಾತ್ರ ವಹಿಸಿದ್ರು. ಅದ್ರಲ್ಲೂ ಅಶ್ವಿನ್ ಅಂತೂ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದ್ರೆ, ಎರಡೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಮತ್ತು ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ರು. ಅವರೇ ಈ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಷಚ್. ಇನ್ನು ರೋಹಿತ್ ಶರ್ಮಾ ಕೊಡುಗೆಯನ್ನ ಕೂಡ ಇಲ್ಲಿ ಮರೆಯೋ ಹಾಗಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಅವರು ಬಾರಿಸಿದ 161 ರನ್ ಗೆಲುವಿನಲ್ಲಿ ನೆರವಾಯ್ತು.

ಸ್ಕೋರ್​ ವಿವರ:

ಭಾರತ – 329 & 286

ಇಂಗ್ಲೆಂಡ್ – 134 & 164

ಇನ್ನು ಈ ಸರಣಿಯನ್ನ ಭಾರತ 2-1 ಅಥವಾ 3-1ರಿಂದ ಗೆದ್ದರೆ ಟೆಸ್ಟ್​ ವಿಶ್ವಕಪ್​ ರೀತಿ ಇರೋ ಐಸಿಸಿ ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಕ್ವಾಲಿಫೈ ಆಗಲಿದೆ. ಇಂಗ್ಲೆಂಡ್ ಕ್ವಾಲಿಫೈ ಆಗಬೇಕು ಅಂದ್ರೆ ಮುಂದಿನ ಎರಡೂ ಪಂದ್ಯವನ್ನ ಗೆದ್ದು ಸರಣಿಯನ್ನ 3-1ರಿಂದ ವಶಪಡಿಸಿಕೊಳ್ಳಬೇಕು. ಒಂದ್ವೇಳೆ ಈ ಸರಣಿ 1-1, 2-2 ಸಮಬಲ ಕಂಡರೆ ಅಥವಾ ಇಂಗ್ಲೆಂಡ್ ಏನಾದ್ರೂ 2-1ರಿಂದ ಸರಣಿ ಗೆದ್ದರೆ ಆಗ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಕ್ವಾಲಿಫೈ ಆಗುತ್ತೆ. ಮೂರೂ ತಂಡಗಳ ನಡುವೆ ಪೈಪೋಟಿ ಇರೋದ್ರಿಂದ ಈ ಟೆಸ್ಟ್ ಸರಣಿ ಭಾರಿ ಕುತೂಹಲ ಕೆರಳಿಸಿದೆ. ಈಗಾಗಲೇ ನ್ಯೂಜಿಲೆಂಡ್​ ತಂಡ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

-masthmagaa.com

Contact Us for Advertisement

Leave a Reply