masthmagaa.com:

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ಅತಿಚಿಕ್ಕ ಟೆಸ್ಟ್ ಮ್ಯಾಚ್​ಗಳಲ್ಲೊಂದು ನಡೆದಿದೆ. ಹೌದು ಭಾರತ ಮತ್ತು ಇಂಗ್ಲೆಂಡ್​ ನಡುವೆ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ 5 ದಿನ ನಡೆಯಬೇಕಿದ್ದ ಟೆಸ್ಟ್​ ಮ್ಯಾಚ್​ ಎರಡೇ ದಿನಕ್ಕೆ ಮುಗಿದಿದೆ. ಅಕ್ಷರ್ ಪಟೇಲ್ ಮತ್ತು ಆರ್​. ಅಶ್ವಿನ್ ಸ್ಪಿನ್ ದಾಳಿಗೆ ಸಿಲುಕಿದ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 112 ರನ್​ಗೆ ಆಲೌಟ್​ ಆಗಿತ್ತು. ಆಮೇಲೆ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೂಡ 145 ರನ್ ಗಳಿಸಲಷ್ಟೇ ಶಕ್ತವಾಯ್ತು. ನಂತರ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಮತ್ತೊಮ್ಮೆ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ದಾಳಿಗೆ ಸಿಕ್ಕು ಜಸ್ಟ್​ 81 ರನ್​ಗೆ ತನ್ನೆಲ್ಲಾ ವಿಕೆಟ್​ ಕಳ್ಕೊಳ್ತು. ಈ ಮೂಲಕ ಟೀಂ ಇಂಡಿಯಾಗೆ ಕೇವಲ 49 ರನ್ ಟಾರ್ಗೆಟ್​ ನೀಡ್ತು. ಇದನ್ನ ಆರಾಮಾಗಿ ಚೇಸ್ ಮಾಡಿದ ಭಾರತ 10 ವಿಕೆಟ್​ಗಳಿಂದ ಗೆಲುವಿನ ನಗೆ ಬೀರ್ತು.

ಅಕ್ಷರ್ ಪಟೇಲ್ ಗುಜರಾತ್​ನವರು.. ತವರು ಪಿಚ್​ನಲ್ಲಿ ಅಕ್ಷರ್ ಪಟೇಲ್​​ ಮೊದಲ ಇನ್ನಿಂಗ್ಸ್​ನಲ್ಲಿ 6, ಎರಡನೇ ಇನ್ನಿಂಗ್ಸ್​ನಲ್ಲಿ 5.. ಒಟ್ಟು 11​ ಪಡೆದು ಮಿಂಚಿದ್ರು. ಇದರೊಂದಿಗೆ ಡೇ ನೈಟ್​ ಟೆಸ್ಟ್​ನಲ್ಲಿ 11 ವಿಕೆಟ್​ ಪಡೆದ ಮೊದಲ ಬೌಲರ್ ಎನಿಸಿಕೊಂಡ್ರು. ಅಶ್ವಿನ್ 3 ಮತ್ತು 4.. ಒಟ್ಟು 7 ವಿಕೆಟ್​ ಪಡೆದು ಮಿಂಚಿದ್ರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದ ಭಾರತದ 4ನೇ ಬೌಲರ್ ಎನಿಸಿಕೊಂಡ್ರು ಅಶ್ವಿನ್. ಜೊತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ 400 ವಿಕೆಟ್ ಪಡೆದ ಎರಡನೇ ಫಾಸ್ಟೆಸ್ಟ್ ಬೌಲರ್ ಎನಿಸಿಕೊಂಡ್ರು. ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್ 72 ಮ್ಯಾಚ್​ನಲ್ಲಿ ಈ ಸಾಧನೆ ಮಾಡಿದ್ರೆ, ಅಶ್ವಿನ್ 77ನೇ ಮ್ಯಾಚ್​ನಲ್ಲಿ ದಾಖಲೆ ಮಾಡಿದ್ರು. ಮತ್ತೊಂದುಕಡೆ ತವರಿನಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 21 ಟೆಸ್ಟ್ ಮ್ಯಾಚ್​ಗಳನ್ನ ಗೆದ್ದಿತ್ತು. ಇದೀಗ ಆ ದಾಖಲೆಯನ್ನ ಮುರಿದಿರೋ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವದಲ್ಲಿ 22 ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಇದೇ ಹೈಯೆಸ್ಟ್. ಇನ್ನು ಇವತ್ತು ಒಂದೇ ದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 17 ವಿಕೆಟ್​ ಬಿದ್ದಿದೆ. ಎಲ್ಲವೂ ಸ್ಪಿನ್ನರ್​ಗಳಿಗೆ ಅನ್ನೋದು ವಿಶೇಷ. ಇದರಲ್ಲಿ 7 ವಿಕೆಟ್ ಭಾರತದ್ದು, 10 ವಿಕೆಟ್ ಇಂಗ್ಲೆಂಡ್​ನದ್ದು.

1946ರ ನಂತರದ ಟೆಸ್ಟ್​ ಇತಿಹಾಸದಲ್ಲಿ ಎರಡನೇ ದಿನದಲ್ಲಿ ಮುಕ್ತಾಯಗೊಂಡ 8ನೇ ಮ್ಯಾಚ್​ ಇದು

ಈ ಗೆಲುವಿನೊಂದಿಗೆ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಭಾರತ 2, ಇಂಗ್ಲೆಂಡ್ 1.. ಕೊನೇ ಟೆಸ್ಟ್​ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಗೆಲುವಿನೊಂದಿಗೆ ಐಸಿಸಿ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ನ ಪಾಯಿಂಟ್ಸ್​ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ. ಈ ಚಾಂಪಿಯನ್​ಶಿಪ್​ನ ಫೈನಲ್​ಗೆ ಕ್ವಾಲಿಫೈ ಆಗ್ಬೇಕು ಅಂದ್ರೆ ಕೊನೇ ಟೆಸ್ಟನ್ನ ಭಾರತ ಗೆಲ್ಲಬೇಕು ಅಥವಾ ಅಟ್​​ಲೀಸ್ಟ್​ ಡ್ರಾ ಮಾಡ್ಕೋಬೇಕು. ಒಂದ್ವೇಳೆ ಕೊನೇ ಪಂದ್ಯವನ್ನ ಭಾರತ ಸೋತ್ರೆ ಆಗ ಆಸ್ಟ್ರೇಲಿಯಾ ನಿರಾಯಾಸವಾಗಿ ಫೈನಲ್​ಗೆ ಹೋಗುತ್ತೆ. ಇವತ್ತಿನ ಸೋಲಿನೊಂದಿಗೆ ಫೈನಲ್​ ರೇಸ್​ನಿಂದ ಇಂಗ್ಲೆಂಡ್​ ಹೊರಬಿದ್ದಿದೆ. ನ್ಯೂಜಿಲೆಂಡ್​ ಈಗಾಗಲೇ ಫೈನಲ್​ಗೆ ಕ್ವಾಲಿಫೈ ಆಗಿದೆ. ಮತ್ತೊಂದು ಸ್ಥಾನಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ರೇಸ್ ಏರ್ಪಟ್ಟಿದೆ.

-masthmagaa.com

Contact Us for Advertisement

Leave a Reply