ಕಾಶ್ಮೀರ ವಿಚಾರದಲ್ಲಿ ಚೀನಾ ಉಲ್ಟಾ..! ಕಾಂಗ್ರೆಸ್ ಕೆಂಡ

ಭಾರತ ಭೇಟಿಗೂ ಮುನ್ನ ಕಾಶ್ಮೀರ ವಿಚಾರದಲ್ಲಿ ಉಲ್ಟಾ ಹೊಡೆದಿರೋ ಚೀನಾ ವಿರುದ್ಧ ಕಾಂಗ್ರೆಸ್ ಕೆಂಡಕಾರಿದೆ. ಇಮ್ರಾನ್ ಖಾನ್ ಭೇಟಿ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, ಜಮ್ಮು ಕಾಶ್ಮೀರದ ಮೇಲೆ ನಾವು ನಿಗಾ ಇರಿಸಿದ್ದೇವೆ. ಜಮ್ಮು ಕಾಶ್ಮೀರ ವಿವಾದ ಐತಿಹಾಸಿಕ ವಿವಾದವಾಗಿದ್ದು, ಅದನ್ನು ವಿಶ್ವಸಂಸ್ಥೆಯಲ್ಲೇ ಬಗೆಹರಿಸಬೇಕು ಎಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಜಮ್ಮು ಕಾಶ್ಮೀರದಲ್ಲಿ ಏನಾಗ್ತಿದೆ ಎಂದು ನಾವು ನೋಡುತ್ತಿದ್ದೇವೆ ಎಂದಿದ್ದಾರೆ. ಅದೇ ರೀತಿ ನಾವು ಹಾಂಗ್ ಕಾಂಗ್‍ನಲ್ಲಿ ಪ್ರಜಾಪ್ರಭುತ್ವ ಪರ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡುತ್ತಿದ್ದೇವೆ. ಎರಡನೆಯದಾಗಿ ಕ್ಸಿನ್ ಜಿಯಾಂಗ್‍ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಾವು ನೋಡುತ್ತಿದ್ದೇವೆ. ಮೂರನೆಯದಾಗಿ ಟಿಬೇಟ್‍ನಲ್ಲಿ ಮುಂದುವರಿದ ದಬ್ಬಾಳಿಕೆಯನ್ನು ನಾವು ನೋಡುತ್ತಿದ್ದೇವೆ. ನಾವು ಸೌತ್ ಚೀನಾ ಸಮುದ್ರವನ್ನು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಯಾಕೆ ಹೇಳಿಲ್ಲ ಎಂದು ಪ್ರಶ್ನಿಸಿದ್ದಾರೆ.

Contact Us for Advertisement

Leave a Reply