ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಚೀನಾ ಸಾಥ್

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಇದರ ನಡುವೆ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡೋದು ಖಚಿತವಾಗಿದೆ. ಇದೇ ಅಕ್ಟೋಬರ್ 11ರಂದು ಕ್ಸಿ ಜಿನ್ ಪಿಂಗ್ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಯಾವುದೇ ನಿರ್ದಿಷ್ಠ ವಿಚಾರ ಇಲ್ಲದಿದ್ದರೂ ಎಲ್ಲಾ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಚೀನಾ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತಕ್ಕೆ ಸಾಥ್ ನೀಡಲು ನಿರ್ಧರಿಸಿದೆ. ಭಾರತ ಮತ್ತು ಚೀನಾ ಇದೇ ಡಿಸೆಂಬರ್ ತಿಂಗಳಲ್ಲಿ ಉಗ್ರ ನಿಗ್ರಹ ಸಮರಾಭ್ಯಾಸ ನಡೆಸೋ ಸಾಧ್ಯತೆ ಇದೆ. ಜೊತೆಗೆ ಭಾರತ ಭೇಟಿ ವೇಳೆ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಮೋದಿ ನಡುವೆ ಭಯೋತ್ಪಾದನೆ ಕುರಿತು ಮಾತುಕತೆ ನಡೆಯಲಿದೆ. ಉಗ್ರರಿಗೆ ಹಣಕಾಸು ಸಹಾಯ, ಹಣಕಾಸಿನ ಮೂಲ, ಬೆಂಬಲ ಹೀಗೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ.

ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ವಿಚಾರದಲ್ಲಿ ಚೀನಾ ಭಾರತದ ಪರ ಬ್ಯಾಟ್ ಬೀಸಿತ್ತು. ಜಮ್ಮು ಕಾಶ್ಮೀರ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿ, ಭಾರತ ಮತ್ತು ಪಾಕಿಸ್ತಾನವೇ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎಂದಿತ್ತು.

Contact Us for Advertisement

Leave a Reply