71 ದಿನಗಳ ಬಳಿಕ ಕೊರೋನಾ ಪಟ್ಟವನ್ನ ಅಮೆರಿಕಕ್ಕೆ ಬಿಟ್ಟುಕೊಟ್ಟ ಭಾರತ..!

-masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 61,871 ಹೊಸ ಕೊರೋನಾ ಪ್ರಕರಣದೃಢಪಟ್ಟಿದ್ದು 1,033 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74.94 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1.14 ಲಕ್ಷ ದಾಟಿದೆ.

ಕಳೆದ 24 ಗಂಟೆಗಳಲ್ಲಿ 72,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 65.97 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇನ್ನೂ ಕೂಡ 7.83 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ 88.03% ಇದ್ದು, ಸಾವಿನ ಪ್ರಮಾಂ 1.52% ಇದೆ. ಅಕ್ಟೋಬರ್ 17ರಂದು 9.70 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದೆ. ಇದರೊಂದಿಗೆ ದೇಶದಲ್ಲಿ ಇದುವರೆಗೆ ಒಟ್ಟು 9.42 ಕೋಟಿ ಕೊರೊನಾ ಪರೀಕ್ಷೆಗಳನ್ನ ನಡೆಸಿದಂತಾಗಿದೆ.

ಕಳೆದ ಎರಡು ತಿಂಗಳಿನಿಂದ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣ ದೃಢಪಡುತ್ತಿದ್ದ ಭಾರತದಲ್ಲಿ ಕಳೆದ ಎರಡು ದಿನಗಳಿಂದ ಅಮೆರಿಕಗಿಂತ ಕಡಿಮೆ ಸೋಂಕಿನ ಪ್ರಕರಣಗಳು ದೃಢಪಟ್ಟಿದೆ. ಗುರುವಾರ ಮತ್ತು ಶುಕ್ರವಾರ ಅಮೆರಿಕದಲ್ಲಿ 66,000+ ಮತ್ತು 71,000+ ಪ್ರಕರಣ ದೃಢಪಟ್ಟಿತ್ತು. ಇದೇ ದಿನಗಳಂದು ಭಾರತದಲ್ಲಿ 64,000+ ಮತ್ತು 62,000+ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಆಗಸ್ಟ್​ 6ನೇ ತಾರೀಖಿನಿಂದ ಅಂದ್ರೆ  71 ದಿನಗಳಿಂದ ಅತಿ ಹೆಚ್ಚು ಪ್ರಕರಣ ದೃಢಪಡುತ್ತಿದ್ದ ಭಾರತವು ಕಳೆದ ಎರಡು ದಿನಗಳಿಂದ ಎರಡನೇ ಸ್ಥಾನಕ್ಕೆ ಬಂದಿದೆ. ಭಾರತವನ್ನು ಮೀರಿಸಿರುವ ಅಮೆರಿಕ ಪ್ರತಿದಿನ ಕೇಸ್​ನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಅಂದ್ಹಾಗೆ ಕಳೆದ ಹಲವು ದಿನಗಳ ಟ್ರೆಂಡ್ ನೋಡ್ತಿದ್ರೆ ಅಮೆರಿಕದಲ್ಲಿ ಸೋಂಕಿನ ಪ್ರಕರಣಗಳು ಮತ್ತೆ ಏರುಗತಿಯಲ್ಲಿ ಸಾಗಿರೋದು ಗೊತ್ತಾಗುತ್ತದೆ. ಅದೇ ಭಾರತದಲ್ಲಿ ಸೆಪ್ಟೆಂಬರ್ 17ರಂದು ಇದುವರೆಗಿನ ಗರಿಷ್ಠ 98,000+ ಪ್ರಕರಣ ದೃಢಪಟ್ಟ ಬಳಿಕ ಸೋಂಕಿನ ಪ್ರಕರಣಗಳು ನಿಧಾನಾವಗಿ ಇಳಿಮುಖವಾಗುತ್ತಾ ಸಾಗುತ್ತಿದೆ.

-masthmagaa.com

Contact Us for Advertisement

Leave a Reply