masthamagaa.com:

ಲಂಚ ಕೊಡೋದರಲ್ಲಿ, ಲಂಚ ಪಡೆಯೋದ್ರಲ್ಲಿ ನಾವು ಭಾರತೀಯರು ಏಷ್ಯಾ ಖಂಡದಲ್ಲೇ ಅತ್ಯಂತ ಭ್ರಷ್ಟರು ಅಂತಾ `ದಿ ಟ್ರಾನ್ಸ್ಪರೆನ್ಸಿ ಇಂಟರ್​ನ್ಯಾಶನಲ್’ ವರದಿ ಮಾಡಿದೆ. ಭಾರತದಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಲಂಚ ಕೊಡಲೇಬೇಕು. ನಮ್ಮ ಜನ ಕೂಡಾ ಅಷ್ಟೆ. ಸರ್ಕಾರಿ ಸಿಬ್ಬಂದಿ ಲಂಚ ಕೇಳಿದಾಗ ಸರಿ ಇಲ್ಲ ಸಿಸ್ಟಮ್ ಅಂತಾ ಬೈತಾರೆ. ಆದ್ರೆ ತಮ್ಮದೇ ಏನಾದ್ರೂ ಅಕ್ರಮ, ಕಾನಾನು ಬಾಹಿರ ಕೆಲಸ ಆಗೋದಿದ್ದಾಗ, ಅದೇ ಜನ ತಾವೇ ಲಂಚ ಕೊಟ್ಟು ಅಡ್ಡಕೆಲಸ ಮಾಡಿಸಿಕೊಂಡು ಬರ್ತಾರೆ. ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ನ ನೂತನ ವರದಿಯ ಪ್ರಕಾರ, ಇಲ್ಲಿ ಶೇ 50ಕ್ಕಿಂತ ಹೆಚ್ಚಿನ ಜನ ಲಂಚ ಕೊಟ್ಟು ಕೆಲಸ ಮಾಡಿಸ್ಕೋತಾರೆ. ಶೇ 32ರಷ್ಟು ಜನ ಪರಿಚಯ, ಇನ್ಫ್ಲುಯೆನ್ಸ್ ಆಧಾರ ಮೇಲೆ ಸರ್ಕಾರಿ ಸೇವೆ ಪಡೀತಾರೆ. ಒಟ್ನಲ್ಲಿ ಭ್ರಷ್ಟತೆ ಅನ್ನೋದು ಇತ್ತೀಚೆಗೆ ಈ ದೇಶದ ರಕ್ತದಲ್ಲೇ ಸೇರ್ಕೊಂಡುಬಿಟ್ಟಿದೆ. ಮಾತಾಡೋದ್ ಮಾತ್ರ ಫುಲ್ ದೊಡ್ಡ ದೊಡ್ಡದು. ಆದ್ರೆ ಸಂದರ್ಭ ಬಂದಾಗ ತಾನೊಬ್ಬ ಒಂಚೂರು ಸಣ್ಣ ಭ್ರಷ್ಟಾಚಾರ ಮಾಡಿದ್ರೆ ಏನಾಗಲ್ಲ ಅನ್ನೋ ಮನಸ್ಥಿತಿ. ಇದು ಹೋಗೋ ತನಕ ಉದ್ದಾರ ಆಗೋದು ಬಹಳ ಕಷ್ಟ.

ಅಂದಹಾಗೆ ಭಾರತ, ಚೀನಾ, ಇಂಡೋನೇಶಿಯಾ, ತೈವಾನ್, ಮಾಲ್ಡೀವ್ಸ್, ಶ್ರೀಲಂಕಾ, ಥಾಯ್​ಲ್ಯಾಂಡ್, ಪಿಲಿಫೈನ್ಸ್, ಜಪಾನ್, ನೇಪಾಳ, ಮಲೇಶಿಯಾ, ಬಾಂಗ್ಲಾದೇಶ, ಮಂಗೋಲಿಯಾ, ದಕ್ಷಿಣ ಕೊರಿಯಾ, ಮಯನ್ಮಾರ್, ಕಾಂಬೋಡಿಯಾ ಮತ್ತು ವಿಯಟ್ನಾಮ್ ದೇಶಗಳಲ್ಲಿ ಈ ಸರ್ವೇ ನಡೆಸಲಾಗಿತ್ತು. ಪಾಕಿಸ್ತಾದಲ್ಲಿ ಇಲ್ಲ. ಮಾಡಿದ್ರೆ ಅವ್ರು ನಮಗೆ ಚೆನ್ನಾಗಿ ಫೈಟ್ ಕೊಡ್ತಿದ್ರು. ಅಂದಹಾಗೆ ಚೀನಾ ಇತ್ತೀಚಿನ ವರ್ಷಗಳಲ್ಲಿ ತನ್ನ ಬ್ಯೂರೋಕ್ರಸಿಯಲ್ಲಿ ಮೂಲಭೂತ ಸುಧಾರಣೆಗಳನ್ನ ಮಾಡಿದ ಪರಿಣಾಮ ಅಲ್ಲಿ ಭ್ರಷ್ಟಾಚಾರ ಗಣನೀಯ ಪ್ರಮಾಣದಲ್ಲಿ ಕಂಟ್ರೋಲ್ ಆಗಿದೆ ಅಂತಾ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಹೇಳಿದೆ.

-masthmagaa.com

Contact Us for Advertisement

Leave a Reply