ಇಂಡಿಯಾ ಇನ್ನೋವೇಷನ್ ಇಂಡೆಕ್ಸ್​ನಲ್ಲಿ ಕರ್ನಾಟಕವೇ ನಂಬರ್ 1

masthmagaa.com:

ನೀತಿ ಆಯೋಗ ಬಿಡುಗಡೆ ಮಾಡಿದ ಇಂಡಿಯಾ ಇನ್ನೋವೇಷನ್ ಇಂಡೆಕ್ಸ್ ಅಥವಾ ಆವಿಷ್ಕಾರ ಸೂಚ್ಯಂಕ 2020ರ ಪಟ್ಟಿಯಲ್ಲಿ ಕರ್ನಾಟಕ ಸತತ ಎರಡನೇ ಸಲವೂ ಅಗ್ರ ಸ್ಥಾನ ಪಡೆದಿದೆ. ಸಂಶೋಧನೆ, ಹೊಸ ತಂತ್ರಜ್ಞಾನಗಳ ಅನುಷ್ಠಾನದಲ್ಲಿ ರಾಜ್ಯಗಳ ಸಾಧನೆಯನ್ನ ಪರಿಗಣಿಸಿ ಈ ಸೂಚ್ಯಂಕವನ್ನ ಬಿಡುಗಡೆ ಮಾಡಲಾಗುತ್ತೆ. 17 ಪ್ರಮುಖ ರಾಜ್ಯಗಳ ಈ ಪಟ್ಟಿಯಲ್ಲಿ ಕರ್ನಾಟಕ 42.50 ಸ್ಕೋರ್​ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ 46.60 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ 25.06 ಅಂಕಗಳೊಂದಿಗೆ ಫಸ್ಟ್​ ಇದೆ. ಹೀಗೆ 3 ವಿಭಾಗಗಳನ್ನ ಮಾಡಲಾಗಿದೆ. ಸೋ, ಓವರಾಲ್​ ಆಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನ ಕನ್ಸಿಡರ್ ಮಾಡಿದ್ರೆ ಸ್ಕೋರ್​ ಲೆಕ್ಕದಲ್ಲಿ ದೆಹಲಿ ನಂಬರ್ 1 ಮತ್ತು ಕರ್ನಾಟಕ ನಂಬರ್ 2 ಆಗುತ್ತೆ.

-masthmagaa.com

Contact Us for Advertisement

Leave a Reply