2023ರ ಹಾಕಿ ವಿಶ್ವಕಪ್‌ ಗೆಲ್ಲುವ ಭಾರತದ ಕನಸು ಭಗ್ನ! ನ್ಯೂಜಿಲ್ಯಾಂಡ್‌ ವಿರುದ್ದ ಸೋಲು!‌

masthmagaa.com:

ಒಡಿಶಾದ ಭುವನೇಶ್ವರದಲ್ಲಿ ನಿನ್ನೆ ನಡೆದ 2023ರ ಹಾಕಿ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ದ ಭಾರತ ಸೋತಿದೆ. ಇದರೊಂದಿಗೆ ಭಾರತೀಯ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಜೊತೆಗೆ 48 ವರ್ಷಗಳ ನಂತರ ವಿಶ್ವಕಪ್‌ ಗೆಲ್ಲುವ ಕನಸು ಕೂಡ ಭಗ್ನವಾಗಿದೆ. ಕಳಿಂಗ ಸ್ಟೇಡಿಯಂನಲ್ಲಿ ಉಭಯ ತಂಡಗಳು ತಲಾ 3 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 4-5 ಗೋಲುಗಳ ಅಂತರದಿಂದ ಭಾರತ ಸೋತಿದೆ. ಇನ್ನು ಮಂಗಳವಾರ ಅಂದ್ರೆ ನಾಳೆ ಕ್ವಾರ್ಟರ್‌ ಫೈನಲ್‌ನಲ್ಲಿ ಬಿ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೊ ಹಾಲಿ ಚಾಂಪಿಯನ್‌ ಬೆಲ್ಜಿಯಂ ತಂಡವನ್ನ ನ್ಯೂಜಿಲ್ಯಾಂಡ್‌ ಎದುರಿಸಲಿದೆ.

-masthmagaa.com

Contact Us for Advertisement

Leave a Reply