ಟೀಂ ಇಂಡಿಯಾದ ಮಹತ್ವದ ಸಾಧನೆ! ಕ್ರಿಕೆಟ್‌ನ 3 ಮಾದರಿಗಳಲ್ಲೂ ನಂ.1 ಸ್ಥಾನ!

masthmagaa.com:

ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ ಹೀನಾಯವಾಗಿ ಸೋಲಿಸಿದ ಟೀಂ ಇಂಡಿಯಾ ICC ಟೆಸ್ಟ್‌ ರ್ಯಾಕಿಂಗ್‌ನಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ಕ್ರಿಕೆಟ್‌ ತಂಡ ಇದೀಗ ವಿಶ್ವದ ನಂಬರ್‌ 1 ಟೆಸ್ಟ್‌ ಟೀಂ ಎನಿಸಿಕೊಂಡಿದೆ. ಟೀಂ ಇಂಡಿಯಾ ಈ ಹಿಂದೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಂಬರ್ 1 ಆಗಿತ್ತು. ಈಗ ರೋಹಿತ್ ಬಳಗ ಟೆಸ್ಟ್‌ನಲ್ಲೂ ನಂಬರ್‌ 1 ಆಗಿದೆ. ಇದರೊಂದಿಗೆ ಟೀಂ ಇಂಡಿಯಾ ಎಲ್ಲಾ ಮೂರು ಫಾರ್ಮೆಟ್‌ಗಳಲ್ಲೂ ನಂಬರ್ 1 ತಂಡ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ.

-masthmagaa.com

Contact Us for Advertisement

Leave a Reply