ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ!

masthmagaa.com:

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. 2020ರಲ್ಲಿ ಭಾರತ ಈ 116 ದೇಶಗಳ ಪಟ್ಟಿಯಲ್ಲಿ 94ನೇ ಸ್ಥಾನ ಪಡೆದುಕೊಂಡಿತ್ತು. ಆದ್ರೆ ಈ ವರ್ಷ 101ನೇ ಸ್ಥಾನಕ್ಕೆ ಕಸಿದಿದೆ. ಅಂದ್ರೆ ಕಳೆದೊಂದು ವರ್ಷದಲ್ಲಿ ಭಾರತದ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಜಾಸ್ತಿಯಾಗಿದೆ. ಆಶ್ಚರ್ಯದ ವಿಚಾರ ಅಂದ್ರೆ ಈ ಪಟ್ಟಿಯಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಕೂಡ ಮುಂದಿದೆ. ಚೀನಾ, ಬ್ರೆಜಿಲ್, ಕುವೈತ್ ಸೇರಿದಂತೆ 18 ದೇಶಗಳು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ಐರ್ಲೆಂಡ್ ಮತ್ತು ಜರ್ಮನ್​​ನ ಸಂಘಟನೆಗಳು ಈ ವರದಿ ಸಿದ್ಧಪಡಿಸಿದ್ದು, ಇದನ್ನು ಗ್ಲೋಬಲ್ ಹಂಗರ್ ಇಂಡೆಕ್ಸ್ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. 2020ರಲ್ಲಿ ಭಾರತ 107 ದೇಶಗಳ ಪಟ್ಟಿಯಲ್ಲಿ 94ನೇ ಸ್ಥಾನ ಪಡ್ಕೊಂಡಿತ್ತು. ಆದ್ರೆ ಈ ಸಲ ಕಾಂಪಿಟೇಟರ್ಸ್ ಜಾಸ್ತಿ ಇದಾರೆ. ಅಂದ್ರೆ 116 ದೇಶಗಳ ಪಟ್ಟಿಯಲ್ಲಿ 101ನೇ ಸ್ಥಾನ ಪಡ್ಕೊಂಡಿದೆ. ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚುತ್ತಿರೋದು ಎಚ್ಚರಿಕೆಯ ಕರೆಗಂಟೆ ಅಂತ ಕೂಡ ವರದಿಯಲ್ಲಿ ಎಚ್ಚರಿಸಲಾಗಿದೆ.

-masthmagaa.com

Contact Us for Advertisement

Leave a Reply