ದೇಶದ 5 ರಹಸ್ಯಮಯ ದೇವಸ್ಥಾನಗಳು ಯಾವುದು ಗೊತ್ತಾ..?

ಹಾಯ್ ಫ್ರೆಂಡ್ಸ್, ದೇಶದ ರಹಸ್ಯಮಯ ದೇವಸ್ತಾನಗಳು ಯಾವುದು ಗೊತ್ತಾ..? ಕನ್ಯಾಕುಮಾರಿಯಲ್ಲಿ ಎಲ್ಲೆಲ್ಲೂ ಅಕ್ಕಿ, ಬೇಳೆ ಆಕಾರದ ಚಿಕ್ಕ ಚಿಕ್ಕ ಕಲ್ಲುಗಳಿರೋದ್ಯಾಕೆ..? ಮಹಾರಾಷ್ಟ್ರದ ಆ ನಗರದಲ್ಲಿ ಮನೆಗಳಿಗೆ ಬಾಗಿಲುಗಳೇ ಬೇಕಿಲ್ಲ ಯಾಕೆ ಗೊತ್ತಾ..? ಭಾರತದಲ್ಲೊಂದು ಇಲಿಗಳಿರುವ ದೇವಸ್ಥಾನ ಇದೆ ಅಂದ್ರೆ ನೀವು ನಂಬ್ತೀರಾ..? ಚಂದ್ರದೇವನೇ ಧರೆಗಿಳಿದು ಬಂದು ಕಟ್ಟಿದ ಆ ದೇವಸ್ಥಾನ ಯಾವುದು..? ಎಲ್ಲವನ್ನು ಹೇಳ್ತೀವಿ ನೋಡಿ..

ಫ್ರೆಂಡ್ಸ್.. ಹಿಂದಿನ ಕಾಲದ ದೇವಸ್ಥಾನಗಳನ್ನು ನಿರ್ಮಿಸುವಾಗ ಶಿಲ್ಪಿಗಳು ವಾಸ್ತು ಮತ್ತು ಖಗೋಳ ವಿಜ್ಞಾನವನ್ನು ಗಮನದಲ್ಲಿಟ್ಕೊಂಡು ಮಾಡ್ತಿದ್ರು. ಅಲ್ಲದೆ ರಾಜರು ತಮ್ಮ ಖಜಾನೆಗಳನ್ನು ಅಡಗಿಸಿಟ್ಟು, ಅದರ ಮೇಲೆ ದೇವಸ್ಥಾನಗಳನ್ನು ನಿರ್ಮಿಸಿಬಿಡ್ತಿದ್ರು. ಆಮೇಲೆ ತಾವು ಖಜಾನೆ ಜಾಗಕ್ಕೆ ಓಡಾಡಲು ಬೇರೆಯದ್ದೇ ರಹಸ್ಯ ದಾರಿಗಳನ್ನು ಮಾಡಿಕೊಳ್ತಿದ್ರು. ಇವೆಲ್ಲವನ್ನೂ ಬಿಟ್ಟು ದೇಶದಲ್ಲಿ ಕೆಲವೊಂದು ಹಲವಾರು ರಹಸ್ಯ ದೇವಸ್ಥಾನಗಳಿವೆ. ಈ ದೇಗುಲಗಳ ರಹಸ್ಯವನ್ನು ಯಾರೂ ಈವರೆಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಂಥಹ 5 ದೇವಸ್ಥಾನಗಳನ್ನು ನಾವು ಈ ವರದಿಯಲ್ಲಿ ಹೇಳ್ತಾ ಹೋಗ್ತೀವಿ. ಕೊನೆಯವರೆಗೂ ಗಮನವಿಟ್ಟು ನೋಡಿ..

ನಂ.1
ಕರ್ಣಿ ಮಾತೆ ಮಂದಿರ, ರಾಜಸ್ಥಾನ
ಫ್ರೆಂಡ್ಸ್, ಕರ್ಣಿ ಮಾತೆ ದೇವಸ್ಥಾನ, ಇದು ರಾಜಸ್ತಾನದ ಬಿಕಾನೇರ್‍ನಲ್ಲಿದೆ. ಈ ಕರ್ಣಿ ಮಾತೆಯನ್ನು ದುರ್ಗೆಯ ಅವತಾರ ಅಂತ ಕರೆಯಲಾಗುತ್ತೆ. ಪ್ರತಿದಿನವೂ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಬರ್ತಾರೆ. ನೀವು ನಂಬ್ತೀರೋ ಬಿಡ್ತೀರೋ ಇಲ್ಲಿ ಒಟ್ಟು 20 ಸಾವಿರದಷ್ಟು ಕಪ್ಪು ಬಣ್ಣದ ಇಲಿಗಳಿವೆ. ಹೀಗಾಗಿಯೇ ಇದನ್ನು ಇಲಿಗಳಿರೋ ದೇವಸ್ಥಾನ ಅಂತಲೂ ಹೇಳಲಾಗುತ್ತೆ. ಇಲಿಗಳು ಅಂದ್ರೆ ಸುಮ್ನೆ ಅಲ್ಲ. ಅವುಗಳಿಗೆ ಬೇಕಾದಷ್ಟು ಆಹಾರ ನೀಡಲಾಗುತ್ತೆ. ರಕ್ಷಣೆಯನ್ನೂ ನೀಡಲಾಗುತ್ತೆ. ಇಲ್ಲಿ ಇಲಿಗಳು ಹೇಗೆ ಓಡಾಡ್ತಿರುತ್ತವೆ ಅಂದ್ರೆ ನೀವು ಕಾಲಡಿ ನೋಡಿಕೊಂಡೇ ಓಡಾಡ್ಬೇಕು. ಎಲ್ಲಾದ್ರೂ ಮಿಸ್ ಆಗಿ ಒಂದ್ ಇಲಿ ಮೇಲೆ ಕಾಲಿಟ್ರೆ ಅಪಶಕುನ ಎಂದೇ ಭಾವಿಸಲಾಗುತ್ತೆ. ಅದೇ ಯಾವುದಾದ್ರೂ ಇಲಿ ನಿಮ್ಮ ಕಾಲಿನ ಮೇಲ್ಭಾಗದಿಂದ ದಾಟಿಕೊಂಡು ಹೋದ್ರೆ ಅದೃಷ್ಟ ಎಂದು ಬಾವಿಸಲಾಗುತ್ತೆ. ಇನ್ನು ನೀವು ಬಿಳಿ ಇಲಿ ನೋಡಿದ್ರೆ ಕೇಳೋದೇ ಬೇಡ. ನೀವು ಮನಸ್ಸಿನಲ್ಲಿ ಅಂದುಕೊಂಡಿದ್ದು ಸಕ್ಸಸ್ ಆಗುತ್ತೆ ಅಂತಲೇ ಅರ್ಥ.

ನಂ.2
ಕನ್ಯಾಕುಮಾರಿ ದೇವಿಯ ಮಂದಿರ
ಕನ್ಯಾಕುಮಾರಿಯನ್ನು ದಕ್ಷಿಣ ಭಾರತದ ಎಂಡಿಂಗ್ ಪಾಯಿಂಟ್ ಅಂತಲೇ ಕರೆಯಲಾಗುತ್ತೆ. ಇಲ್ಲಿ ಸಮುದ್ರ ದಡದಲ್ಲಿಯೇ ಕುಮಾರಿ ದೇವಿಯ ಮಂದಿರವಿದೆ. ಇಲ್ಲಿ ಕನ್ಯಾ ರೂಪದ ಪಾರ್ವತಿ ಮಾತೆಗೆ ಪೂಜಿಸಲಾಗುತ್ತೆ. ಇಲ್ಲಿ ದೇವಸ್ಥಾನದ ಒಳಗೆ ಹೋಗುವಾಗ ಪುರುಷರು ಸೊಂಟದಿಂದ ಮೇಲ್ಭಾಗದ ಬಟ್ಟೆಯನ್ನು ತೆಗೆಯಬೇಕು. ಈ ಪದ್ಧತಿ ನಮ್ಮ ರಾಜ್ಯದ ವಿವಿಧ ದೇವಸ್ಥಾನಗಳಲ್ಲೂ ನಾವು ನೋಡ್ಬೋದು. ಪುರಾಣದ ಪ್ರಕಾರ ಇದೇ ಜಾಗದಲ್ಲಿ ಪಾರ್ವತಿ ದೇವಿಯ ವಿವಾಹ ಮುರಿದು ಹೋಗಿತ್ತು. ಇದರಿಂದಾಗಿ ಇಲ್ಲಿದ್ದ ಎಲ್ಲಾ ಅಕ್ಕಿ-ಬೇಳೆ ನಂತರದಲ್ಲಿ ಕಲ್ಲಾಗಿ ಬದಲಾಯ್ತು. ಹೀಗಾಗಿ ಇಲ್ಲಿನ ಸಮುದ್ರ ದಡ ಮತ್ತು ಮರಳಿನಲ್ಲಿ ಅಕ್ಕಿ ಮತ್ತು ಬೇಳೆ ಬಣ್ಣದ ಕಲ್ಲಿನ ಚೂರುಗಳು ಸಿಗುತ್ತವೆ. ಇನ್ನೊಂದು ವಿಶೇಷ ಅಂದ್ರೆ ಈ ಕಲ್ಲಿನ ಚೂರುಗಳು ಕೂಡ ಅಕ್ಕಿ, ಬೇಳೆಯ ಆಕಾರದಲ್ಲಿಯೇ ಇರುತ್ತವೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ತುಂಬಾ ಚೆನ್ನಾಗಿರುತ್ತೆ. ನೀವೇನಾದ್ರೂ ಈ ದೇವಸ್ಥಾನಕ್ಕೆ ಹೋದ್ರೆ ಮಿಸ್ ಮಾಡ್ದೆ ನೋಡ್ಕೊಂಡ್ ಬನ್ನಿ.

ನಂ.3
ಮೇರು ರೆಲಿಜಿಯನ್ ಸ್ಪಾಟ್
ಇದು ಹಿಮಾಲಯ ಪರ್ವತದ ತುತ್ತ ತುದಿಯಲ್ಲಿರುವ ಮಾನಸ ಸರೋವರದಲ್ಲಿರೋ ತುಂಬಾ ಪವಿತ್ರ ಸ್ಥಳವಾಗಿದೆ. ಇಲ್ಲಿ ಸಾಕ್ಷಾತ್ ಶಿವನೇ ಬಂದು ನೆಲೆಸಿದ್ದಾನೆ ಎಂದು ಪುರಾಣ ಹೇಳುತ್ತೆ. ಹೀಗಾಗಿಯೇ ಅತೀ ಎತ್ತರದಲ್ಲಿರುವ ಈ ಜಾಗವನ್ನು ಶಿವ ಮತ್ತು ದೇವಲೋಕದ ಜಾಗ ಎಂದು ಕರೆಯಲಾಗಿದೆ. ರಹಸ್ಯ ಮತ್ತು ಚಮತ್ಕಾರಗಳಿಂದ ಕೂಡಿದ ಈ ಜಾಗದ ಮಹಿಮೆಯನ್ನು ವೇದ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ನಂ.4
ಶನಿ ಶಿಂಗ್ಣಾಪುರ, ಮಹಾರಾಷ್ಟ್ರ
ದೇಶದಲ್ಲಿ ಸೂರ್ಯಪುತ್ರ ಶನಿಯ ತುಂಬಾ ದೇವಸ್ಥಾನಗಳಿವೆ. ಅದ್ರಲ್ಲಿ ಒಂದು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿರೋ ಶನಿ ಶಿಂಗ್ಣಾಪುರ ದೇವಾಲಯ. ವಿಶ್ವಪ್ರಸಿದ್ಧವಾಗಿರೋ ಈ ದೇವಸ್ಥಾನದ ವಿಶೇಷತೆ ಅಂದ್ರೆ ಇಲ್ಲಿ ಶನಿದೇವರ ಪ್ರತಿಮೆಗೆ ಯಾವುದೇ ಮೇಲ್ಛಾವಣಿ ಇಲ್ಲ. ನೇರವಾಗಿ ಆಕಾಶದ ಕೆಳಗೆಯೇ ಕಲ್ಲಿನ ಪ್ರತಿಮೆ ಇದೆ. ಈ ನಗರದಲ್ಲಿ ಶನಿ ಮಹಾರಾಜನ ಹವಾ ಯಾವ ಮಟ್ಟಿಗೆ ಇದೆ ಅಂದ್ರೆ ಇಲ್ಲಿ ಹೆಚ್ಚಿನ ಮನೆಗಳಿಗೆ ಬಾಗಿಲು, ಕಿಟಕಿಗಳೇ ಇಲ್ಲ. ಬಾಗಿಲ ಬದಲು ಕೇವಲ ಪರದೆ ಹಾಕಿಕೊಂಡಿರುತ್ತಾರೆ. ಯಾಕಂದ್ರೆ ಇಲ್ಲಿ ಯಾವುದೇ ಕಳ್ಳತನದ ಭಯವೇ ಇಲ್ಲ. ಯಾರಾದ್ರೂ ಕಳ್ಳತನ ಮಾಡಿದ್ರೆ ಖುದ್ದು ಶನಿ ಮಹಾರಾಜನೇ ಶಿಕ್ಷೆ ನೀಡುತ್ತಾರೆ ಅನ್ನೋ ನಂಬಿಕೆ ಇದೆ. ಇದಕ್ಕೆ ಹಲವಾರು ಪ್ರತ್ಯಕ್ಷ ನಿದರ್ಶನಗಳೂ ಇವೆ. ಶನಿದೋಷಗಳಿಂದ ಮುಕ್ತರಾಗಲು ಪ್ರತಿ ಶನಿವಾರ ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ನಂ.5
ಸೋಮನಾಥ ಮಂದಿರ, ಗುಜರಾತ್
ಫ್ರೆಂಡ್ಸ್ ಈ ಸೋಮನಾಥ ಮಂದಿರ ಹಿಂದೂಗಳ ದೇವಾಲಯಗಳಲ್ಲಿ ತುಂಬಾ ಮಹತ್ವದ್ದಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗದ ರೂಪದಲ್ಲಿ ನೋಡಲಾಗುತ್ತೆ. ಮೊದಲಿಗೆ ಇಲ್ಲಿ ಶಿವಲಿಂಗ ಗಾಳಿಯಲ್ಲಿ ತೇಲುತ್ತಿತ್ತು. ಆದ್ರೆ ದುಷ್ಟ ಆಕ್ರಮಣಕಾರಿಗಳು ಇದನ್ನು ಒಡೆದುಹಾಕಿದ್ರು. ಒಟ್ಟು 24 ಶಿವಲಿಂಗಗಳನ್ನು ಸ್ಥಾಪಿಸಲಾಗಿತ್ತು. ಇವುಗಳಲ್ಲಿ ಸೋಮನಾಥದಲ್ಲಿರುವ ಶಿವಲಿಂಗ ನಟ್ಟನಡುವೆ ಇತ್ತು. ಈ ಲಿಂಗ ಆಕಾಶದಲ್ಲಿರುವ ಕರ್ಕಾಟಕ ಸಂಕ್ರಾಂತಿ ರೇಖೆಯ ಕೆಳಗೆ ಬರುತ್ತದೆ. ಈ ದೇವಸ್ಥಾನವನ್ನು ಚಂದ್ರದೇವನೇ ಬಂದು ಕಟ್ಟಿಸಿದ್ದರು ಅನ್ನೋ ನಂಬಿಕೆ ಕೂಡ ಇದೆ. ಋಗ್ವೇದದಲ್ಲೂ ಈ ಬಗ್ಗೆ ಉಲ್ಲೇಖವಿದೆ. ಈ ದೇವಾಲಯದವನ್ನು 17 ಬಾರಿ ನಾಶ ಮಾಡಲಾಗಿದ್ದು, ಪ್ರತಿಬಾರಿಯೂ ಪುನರ್‍ನಿರ್ಮಾಣ ಮಾಡಲಾಗಿದೆ. ಶ್ರೀಕೃಷ್ಣ ಇದೇ ಪ್ರದೇಶದಲ್ಲಿ ದೇಹತ್ಯಾಗ ಮಾಡಿದ್ದರು. ಆ ಕಥೆಯನ್ನು ಇನ್ನೊಂದು ವಿಡಿಯೋದಲ್ಲಿ ಹೇಳಿದ್ದೇವೆ. ಕೆಳಗೆ ಡಿಸ್ಕ್ರಿಪ್ಶನ್ ಬಾಕ್ಸ್‍ನಲ್ಲಿ ಲಿಂಕ್ ಹಾಕಿದ್ದೇವೆ ನೀವು ನೋಡಬಹುದು. ಹೀಗಾಗಿಯೇ ಇಲ್ಲಿ ಶ್ರೀಕೃಷ್ಣನ ಒಂದು ದೇವಸ್ಥಾನ ಕೂಡ ಇದೆ.

ಫ್ರೆಂಡ್ಸ್ ಇದು ಭಾರತದ 5 ರಹಸ್ಯ ದೇವಾಲಯಗಳು.. ಈ ಮಾಹಿತಿ ನಿಮಗೆ ಇಷ್ಟವಾಗಿದ್ರೆ ಆಗಿದ್ರೆ ಎಲ್ಲರಿಗೂ ಶೇರ್ ಮಾಡಿ..

Contact Us for Advertisement

Leave a Reply