ಮೆಹುಲ್ ಚೋಕ್ಸಿಗೆ ಇನ್ಮುಂದೆ ಜೈಲೇ ಗತಿ!

masthmagaa.com:

ಭಾರತದಲ್ಲಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ, ವಿದೇಶಕ್ಕೆ ಹೋಗಿ ಜಾಲಿಯಾಗಿದ್ದ ಮೆಹುಲ್ ಚೋಕ್ಸಿಯ ಕರಾಳ ದಿನಗಳು ಶುರುವಾದಂತಿದೆ. ಆಂಟಿಗುವಾದಲ್ಲಿ ನಾಪತ್ತೆಯಾಗಿ ಡೊಮಿನಿಕಾದಲ್ಲಿ ಸಿಕ್ಕಿಬಿದ್ದಿದ್ದ ಚೋಕ್ಸಿಗೆ ಕೋರ್ಟ್​​ ಜೈಲು ಶಿಕ್ಷೆ ವಿಧಿಸಿದೆ. ಇಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಚೋಕ್ಸಿಗೆ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೀಗ ಅದನ್ನು ಪೊಲೀಸ್ ಕಸ್ಟಡಿ ಅಂತ್ಯಗೊಳಿಸಿ ಜೈಲಿಗೆ ಕಳುಹಿಸಲು ಆದೇಶಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲೇ ಇರಲಿದ್ದು, ಟ್ರೀಟ್ಮೆಂಟ್ ಎಲ್ಲಾ ಆದ್ಮೇಲೆ ಜೈಲಿಗೆ ಶಿಫ್ಟ್ ಮಾಡಲಾಗುತ್ತೆ ಅಂತ ವಕೀಲರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply