ಮತ್ತೊಮ್ಮೆ ICC ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ!

masthmagaa.com:

ಕ್ರಿಕೆಟ್‌ ಜಗತ್ತಲ್ಲಿ ಭಾರತಕ್ಕೆ ಮತ್ತೊಂದು ಹಾರ್ಟ್‌ಬ್ರೇಕ್‌ ಆಗಿದೆ. ಭಾನುವಾರ ನಡೆದ ಅಂಡರ್‌19 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಜಯ ಗಳಿಸಿದೆ. ಅಂಡರ್‌19 ವಿಶ್ವಕಪ್‌ನ್ನ ಜನ ಅಷ್ಟಾಗಿ ಫಾಲೋ ಮಾಡದೇ ಇರ್ಬೋದು. ಆದ್ರೆ ಎಲ್ಲೋ ಒಂದ್‌ ಕಡೆ ಕಪ್‌ ಗೆದ್ದು 2023ರಲ್ಲಿ ಆದ ಗಾಯಕ್ಕೆ ಮುಲಾಮು ಸಿಗ್ಬೋದು ಅನ್ನೋ ಹೋಪ್ಸ್‌ ಇಟ್ಕೊಂಡಿದ್ರು. ಆದ್ರೆ 79 ರನ್‌ಗಳಿಂದ ಗೆದ್ದ ಕಾಂಗರೂ ಟೀನೇಜರ್‌ಗಳು 4ನೇ ಬಾರಿ ಕಪ್‌ ಎತ್ತಿದ್ದಾರೆ. ಆ ಮೂಲಕ ಕಳೆದ ಮೂರು ತಿಂಗಳಲ್ಲಿ ನಡೆದ 3 ICC ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದೆ. ಮೊದಲು ICC ವರ್ಲ್ಡ್‌ಕಪ್‌, ನಂತರ ಟೆಸ್ಟ್‌ ಚಾಂಪಿಯನ್‌ಷಿಪ್‌, ಈಗ ಅಂಡರ್‌19 ವರ್ಲ್ಡ್‌ಕಪ್.‌ ಅಂದ್ಹಾಗೆ ಟೂರ್ನಿಯಲ್ಲಿ ಉದಯ್‌ ಸಹಾರನ್‌, ಮುಷೀರ್‌ ಖಾನ್‌ ಹಾಗೂ ಸಚಿನ್‌ ದಾಸ್‌ ಉತ್ತಮ ಪ್ರದರ್ಶನ ತೋರಿದ್ದಾರೆ.

-masthmagaa.com

Contact Us for Advertisement

Leave a Reply