ಭಾರತ ಮತ್ತು ಯುನೈಟೆಡ್ ಕಿಂಗ್​​ಡಮ್ ನಡುವೆ ಹಲವು ಒಪ್ಪಂದಕ್ಕೆ ಮುದ್ರೆ!

masthmagaa.com:

ಯುನೈಟೆಡ್ ಕಿಂಗ್​ಡಮ್​​ನ ಫಾರಿನ್ ಸೆಕ್ರೆಟರಿ ಲಿಜ್​​ ಟ್ರುಸ್​​​​ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ವಿದೇಶಾಂಗ ಸಚಿವ ಎಸ್​.ಜೈಶಂಕರ್​​, ಪರಿಸರ ಸಚಿವ ಭೂಪೇಂದರ್ ಯಾದವ್​​ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಉಭಯದೇಶಗಳ ನಡುವಿನ ಹಲವಾರು ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದ್ರಂತೆ ಯುನೈಟೆಡ್ ಕಿಂಗ್​ಡಮ್ ಭಾರತದಲ್ಲಿ ಹಸಿರು ತಂತ್ರಜ್ಞಾನ ಮೂಲಸೌಕರ್ಯ ಯೋಜನೆಗಳಿಗಾಗಿ 7 ಕೋಟಿ ಪೌಂಡ್ ಅಂದ್ರೆ 721 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಅಂತ ಭಾರತದಲ್ಲಿರೋ ಬ್ರಿಟಿಷ್ ರಾಯಭಾರಿ ಕಚೇರಿ ತಿಳಿಸಿದೆ.

ಇದೇ ವೇಳೆ ಯುನೈಟೆಡ್​ ಕಿಂಗ್​ಡಮ್​​ನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನಿಕೋಲಸ್ ಕಾರ್ಟರ್ ಮತ್ತು ನೌಕಾಪಡೆ ಚೀಫ್ ಅಡ್ಮಿರಲ್ ಸರ್ ಟೋನಿ ರಡಾಕಿನ್ ಕೂಡ ಭಾರತ ಪ್ರವಾಸದಲ್ಲಿದ್ದು, ವಿವಿಧ ಸಚಿವರು ಮತ್ತು ಸೇನೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply