masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೀತಿರೋ 3ನೇ ಟೆಸ್ಟ್​ನ 2ನೇ ದಿನದಾಟದ ಅಂತ್ಯಕ್ಕೆ ಭಾರತ 96 ರನ್​ಗೆ 2 ವಿಕೆಟ್​ ಕಳೆದುಕೊಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 242 ರನ್​ ಹಿನ್ನಡೆ ಅನುಭವಿಸಿದೆ. ನಿನ್ನೆ 166 ರನ್​ಗೆ 2 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇವತ್ತು ಬ್ಯಾಟಿಂಗ್ ಮುಂದುವರಿಸಿ 338 ರನ್​​ಗೆ ಆಲೌಟ್​ ಆಯ್ತು. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಮಿಂಚಿದ್ರು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್​ ಪಡೆದ್ರು. ಬಳಿಕ ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಬ್​ಮನ್​ ಗಿಲ್ ಮೊದಲ ವಿಕೆಟ್​ಗೆ 70 ರನ್​ಗಳ ಜೊತೆಯಾಟ ನೀಡಿದ್ರು. ರೋಹಿತ್ ಶರ್ಮಾ 26 ಮತ್ತು ಶುಬ್​ಮನ್​ ಗಿಲ್ 50 ರನ್ ಮಾಡಿ ಔಟಾದ್ರು. ಸದ್ಯ ಚೇತೇಶ್ವರ ಪೂಜಾರ ಮತ್ತು ನಾಯಕ ಅಜಿಂಕ್ಯ ರಹಾನೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ: 338/10

ಭಾರತ: 96/2

-masthmagaa.com

Contact Us for Advertisement

Leave a Reply