masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ನಡೀತಿರೋ 4ನೇ ಮತ್ತು ಕೊನೇ ಟೆಸ್ಟ್​ನ 3ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಯಾವುದೇ ವಿಕೆಟ್​ ನಷ್ಟವಿಲ್ಲದೆ 21 ರನ್​ ಗಳಿಸಿದೆ. ಅಂದ್ಹಾಗೆ 2ನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ಭಾರತ ಇವತ್ತು ಬ್ಯಾಟಿಂಗ್ ಮುಂದುವರಿಸಿ 336 ರನ್​ಗೆ ಆಲೌಟ್​ ಆಯ್ತು. ಟೀಂ ಇಂಡಿಯಾ ಪರ ಶಾರ್ದೂಲ್​ ಠಾಕೂರ್ ಮತ್ತು ವಾಷಿಂಗ್ಟನ್​ ಸುಂದರ್ ಅರ್ಧಶತಕ ಸಿಡಿಸಿ ಮಿಂಚಿದ್ರು. ಇದು ಇಬ್ಬರದ್ದು ಚೊಚ್ಚಲ ಅರ್ಧಶತಕ ಕೂಡ ಹೌದು. ಭಾರತದ ಪರ ಶಾರ್ದೂಲ್ ಠಾಕೂರ್ ಭಾರಿಸಿದ 67 ರನ್ನೇ ಹೈಯೆಸ್ಟ್ ಸ್ಕೋರ್.. ಅದ್​ ಬಿಟ್ರೆ ಸುಂದರ್​ ಭಾರಿಸಿದ 62 ರನ್​ ಸೆಕೆಂಡ್​ ಹೈಯೆಸ್ಟ್. ಇವರಿಬ್ರು ಸೇರಿಕೊಂಡು 123 ರನ್​ಗಳ ಪಾರ್ಟ್​​ನರ್​ಶಿಪ್ ನೀಡಿ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ರು. ಆಸ್ಟ್ರೇಲಿಯಾ ಪರ ಹೇಝಲ್​ವುಡ್​ 5 ವಿಕೆಟ್ ಪಡೆದು ಮಿಂಚಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗೆ ಆಲೌಟಾಗಿದ್ದ ಆಸ್ಟ್ರೇಲಿಯಾ, ಎರಡನೇ ಇನ್ನಿಂಗ್ಸ್​ನ 21 ರನ್ ಭಾರಿಸಿ 54 ರನ್​ಗಳ ಅಲ್ಪ ಮುನ್ನಡೆ ಪಡೆದಿದೆ. ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿರುವ ಕೊನೇ ಟೆಸ್ಟ್​ ಡ್ರಾ ಆಗುವ ಲಕ್ಷಣ ಕಾಣ್ತಿದೆ. ಆದ್ರೆ ಕ್ರಿಕೆಟ್​ನಲ್ಲಿ ಏನ್ ಬೇಕಾದ್ರೂ ಆಗ್ಬೋದು ಅನ್ನೋದನ್ನ ಯಾರೂ ಮರೀಬಾರ್ದು.

-masthmagaa.com

Contact Us for Advertisement

Leave a Reply