ಭಾರತ-ನ್ಯೂಜಿಲೆಂಡ್​ ಟೆಸ್ಟ್​​​: 2ನೇ ದಿನದ ಅಪ್​ಡೇಟ್​ ಇಲ್ಲಿದೆ..

masthmagaa.com:

ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಕಾನ್​ಪುರ್​ನಲ್ಲಿ ನಡೀತಿರೋ ಮೊದಲ ಟೆಸ್ಟ್​​ನ ಎರಡನೇ ದಿನದಾಟ ಮುಗಿದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 358 ರನ್​​ಗೆ ಆಲೌಟ್​ ಆಯ್ತು. ಟೆಸ್ಟ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್​ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ರು. ನ್ಯೂಜಿಲ್ಯಾಂಡ್​ ಪರ ಟಿಮ್​ ಸೌದಿ 5 ವಿಕೆಟ್​ ಪಡೆದು ಮಿಂಚಿದ್ರು. ನಂತ್ರ ಮೊದಲ ಇನ್ನಿಂಗ್ಸ್ ಆರಂಭಿಸಿರೋ ಕಿವೀಸ್​ ಆರಂಭಿಕರು ಶತಕದ ಜೊತೆಯಾಟ ನೀಡಿ ಮೂರನೇ ದಿನಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಂತ್ಯಕ್ಕೆ ನ್ಯೂಜಿಲ್ಯಾಂಡ್ ಯಾವುದೇ ವಿಕೆಟ್​ ನಷ್ಟವಿಲ್ಲದೆ​ 129ರನ್​ ಗಳಿಸಿದೆ.

-masthmagaa.com

Contact Us for Advertisement

Leave a Reply