ಪಾಕಿಸ್ತಾನಕ್ಕೆ ಬ್ಯಾಟಿಂಗ್ ಶಾಕ್ ಟ್ರೀಟ್‌ಮೆಂಟ್! ಪಾಕ್ ಚೆಂಡು’ಆಡಿದ’ ಕೊಹ್ಲಿ+KL!

masthmagaa.com:

ಮಳೆಯಿಂದ ಎರಡನೇ ದಿನಕ್ಕೆ ಮುಂದೂಡಿಕೆಯಾಗಿದ್ದ ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯದಲ್ಲಿ ಭಾರತ ಅಕ್ಷರಶಃ ಅಬ್ಬರಿಸಿದೆ. ಪಾಕ್‌ಗೆ ಗೆಲ್ಲಲು 357 ರನ್‌ಗಳ ಕಠಿಣ ಗುರಿ ನೀಡಿದೆ. ಪಾಕ್‌ ವಿರುದ್ದ ಸದಾ ಭೋರ್ಗರೆಯುವ ರನ್‌ ಮಷಿನ್‌ ಕಿಂಗ್‌ ಕೊಹ್ಲಿ ಮತ್ತೊಂದು ಭರ್ಜರಿ ಶತಕವನ್ನ ಬಾರಿಸುವ ಮೂಲಕ ತಮ್ಮ ಸಿಂಹಾಸನಕ್ಕೆ ಮರಳಿದ್ದು ಸಿಕ್ಸರ್‌ ಮೂಲಕ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದ್ದಾರೆ. ಅತ್ತ ಇಂಜುರಿಯಿಂದ ದೀರ್ಘಕಾಲ ತಂಡದಿಂದ ಹೊರಗಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ ಕೂಡ ಶತಕದ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ವಿರಾಟ್‌ 94 ಬಾಲ್‌ಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ ಸಿಡಿಸುವ ಮೂಲಕ 122 ರನ್‌ ಗಳಿಸಿ ನಾಟ್‌ ಔಟ್‌ ಆಗಿದ್ದಾರೆ. ಈ ಮೂಲಕ ಒನ್‌ಡೇ ಇಂಟರ್‌ನ್ಯಾಷನಲ್‌ 47ನೇ ಸೆಂಚುರಿ ಬಾರಿಸಿದ್ದಾರೆ. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಏಕದಿನದಲ್ಲಿ 13 ಸಾವಿರ ರನ್‌ ಗಳಿಸಿದ ಫಾಸ್ಟೆಸ್ಟ್‌ ಆಟಗಾರ ಅನ್ನೋ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೊಲಂಬೋ ಪ್ರೇಮದಾಸ ಮೈದಾನದಲ್ಲಿ ಸತತ 4ನೇ ಸೆಂಚುರಿ ಗಳಿಸಿದ್ದಾರೆ. ‌ಅಂದ್ಹಾಗೆ ನೆನ್ನೆ 24.1 ಓವರ್‌ಗಳಿದ್ದಾಗ ಮಳೆ ಬಂದು ಪಂದ್ಯ ಮೀಸಲು ದಿನವಾದ ಇಂದಿಗೆ ಮುಂದೂಡಿಕೆ ಆಗಿತ್ತು. ಆದ್ರೆ ಕೊಹ್ಲಿ-ರಾಹುಲ್‌ ಜೋಡಿ ವಿಕೆಟ್‌ ಕಳೆದುಕೊಳ್ಳದೇ 3ನೇ ವಿಕೆಟ್‌ಗೆ 233 ರನ್‌ ಗಳಿಸ್ತು. ಇದು ಏಷ್ಯಾಕಪ್‌ನಲ್ಲಿ ಭಾರತದ ಹೈಯೆಸ್ಟ್‌ ಪಾರ್ಟ್ನರ್‌ಶಿಪ್‌. ಜೊತೆಗೆ ಒನ್‌ಡೇಯಲ್ಲಿ ಪಾಕ್‌ ವಿರುದ್ಧ ಕೂಡ ಹೈಯೆಸ್ಟ್‌ ಪಾರ್ಟ್ನರ್‌ಶಿಪ್‌.

-masthmagaa.com

Contact Us for Advertisement

Leave a Reply