ಕೊಹ್ಲಿ ಅಬ್ಬರ.. ಸಚಿನ್, ಸೆಹ್ವಾಗ್ ದಾಖಲೆ ಪೀಸ್ ಪೀಸ್..!

ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ದಾಖಲೆ ಬದಿಗೆ ಸರಿಸಿದ್ದಾರೆ. ಪುಣೆಯಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಬ್ಬರದಾಟ ಆಡಿ, 28 ಬೌಂಡರಿ ಬಾರಿಸೋ ಮೂಲಕ 7ನೇ ಬಾರಿಗೆ ದ್ವಿಶತಕದ ಸಾಧನೆ ಮಾಡಿದ್ದಾರೆ. ಸಚಿನ್ ಮತ್ತು ಸೆಹ್ವಾಗ್ ರ 6 ದ್ವಿಶತಕ ಸಿಡಿಸಿದ್ದೇ ಈವರೆಗಿನ ಸಾಧನೆಯಾಗಿತ್ತು. ಇನ್ನೊಂದು ವಿಷ್ಯ ಅಂದ್ರೆ 254 ರನ್ ಸಿಡಿಸಿದ್ದ ಕೊಹ್ಲಿ ಅಜೇಯರಾಗಿ ಉಳಿದಿದ್ದಾರೆ.

ಇನ್ನು 2ನೇ ಟೆಸ್ಟ್ ಪಂದ್ಯದಲ್ಲೂ ಅಬ್ಬರದಾಟ ಆಡಿದ ಭಾರತ 6 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಇನ್ನು ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಯಾಂಕ್ ಅಗರ್ ವಾಲ್ 2ನೇ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚಿದ್ದರು. ಇನ್ನು ಜಡೇಜಾ 90 ರನ್ ಸಿಡಿಸಿ ತಾವು ಆಲ್ ರೌಂಡರ್ ಆಟಗಾರ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Contact Us for Advertisement

Leave a Reply