ಜಡೇಜಾ ಆಡುವಾಗ ಮಲಗಿದ್ರಾ..? ಸೆಹ್ವಾಗ್ ಗೆ ಜಡೇಜಾ ಫ್ಯಾನ್ ಪ್ರಶ್ನೆ

ಟೀಂ ಇಂಡಿಯಾ ಮಾಜಿ ಆಟಗಾರ ಸೆಹ್ವಾಗ್‍ಗೆ ರವೀಂದ್ರ ಜಡೇಜಾ ಪರೋಕ್ಷವಾಗಿ ಜಾಡಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿದ್ದ, ಭಾರತಕ್ಕೆ ವಿರೇಂದ್ರ ಸೆಹ್ವಾಗ್ ಅಭಿನಂದಿಸಿದ್ದರು. ರೋಹಿತ್ ಶರ್ಮಾ, ಮಯಾಂಕ್, ಶಮಿ, ಅಶ್ವಿನ್, ಪುಜಾರಾ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದರು. ಆದ್ರೆ ಇದು ರವೀಂದ್ರ ಜಡೇಜಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸಿಟ್ಟಿಗೆದ್ದ ಅಭಿಮಾನಿ ಬಿನೀತ್ ಪಟೇಲ್ ಎಂಬಾತ, ನಿಮಗೆ ಟಿವಿಯಲ್ಲಿ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಕಾಣಿಸಲಿಲ್ವಾ..? ಅಥವಾ ಮಲಗಿಬಿಟ್ಟಿದ್ರಾ ಎಂದು ವಿರೇಂದ್ರ ಸೆಹ್ವಾಗ್‍ಗೆ ಪ್ರಶ್ನಿಸಿದ್ದರು. ಈ ಟ್ವೀಟ್ ಅನ್ನು ರವೀಂದ್ರ ಜಡೇಜಾ ರೀಟ್ವೀಟ್ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿರೇಂದ್ರ ಸೆಹ್ವಾಗ್‍ಗೆ ಅಭಿಮಾನಿ ಹೇಳಿದ್ದನ್ನೇ ಹೇಳಲು ಪ್ರಯತ್ನಿಸಿದ್ದಾರೆ.

Contact Us for Advertisement

Leave a Reply