ಯೋಧರ ಆಕ್ಸಿಜನ್ ಪ್ಲಾಂಟ್ ಗಾಗಿ ಒಡವೆ ಮಾರಿದ ದಂಪತಿ..!

ಸಿಯಾಚಿನ್ ನಲ್ಲಿ ಭಾರತೀಯ ಯೋಧರು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಜೀವಂತವಾಗಿರಲು ತುಂಬಾ ಅಗತ್ಯವಾದ ಆಮ್ಲಜನಕದ ಕೊರತೆಯಿಂದ ಯೋಧರು ಪರದಾಡುತ್ತಾರೆ. ಹೀಗಾಗಿ ಮಹಾರಾಷ್ಟ್ರದ ಪುಣೆ ಮೂಲದ ದಂಪತಿ ಯೋಧರಿಗೆ ಆಕ್ಸಿಜನ್ ಪ್ಲಾಂಟ್ ದಾನ ಮಾಡಿದ್ದಾರೆ. ಇದಕ್ಕಾಗಿ ಈ ದಂಪತಿ ತಮ್ಮ ಬಳಿ ಇದ್ದ ಎಲ್ಲಾ ಅಮೂಲ್ಯವಾದ ವಸ್ತುಗಳು ಮತ್ತು ಒಡವೆಗಳನ್ನು ಮಾರಿದ್ದಾರೆ. ಯೋಗೇಶ್ ಚಿತಾಡೆ ಎಂಬುವವರಿಗೆ ಮೊದಲು ಯೋಧರ ಈ ಕಷ್ಟದ ಬಗ್ಗೆ ಗೊತ್ತಿರಲಿಲ್ಲ. ಒಂದು ಸಲ ಪರಮವೀರ ಚಕ್ರ ಪ್ರಶಸ್ತಿ ಪಡೆದಿರೋ ಬಾನಾ ಸಿಂಗ್ ಈ ಬಗ್ಗೆ ತಿಳಿಸುತ್ತಾರೆ. ಇದಾದ ಬಳಿಕ ಯೋಗೇಶ್ ಚಿತಾಡೆ ದಂಪತಿ ಆಕ್ಸಿಜನ್ ಪ್ಲಾಂಟ್‍ಗೆ ದುಡ್ಡು ಒಟ್ಟು ಮಾಡಲು ಶುರು ಮಾಡಿದ್ರು. 2018ರ ಏಪ್ರಿಲ್ 24ರಂದು ಈ ದಂಪತಿ ಸಿದ್ಧತೆ ಆರಂಭಿಸಿದ್ದರು. ಕೊನೆಗೂ ದಂಪತಿ ಆಕ್ಸಿಜನ್ ಪ್ಲಾಂಟ್‍ಗಾಗಿ 2 ಕೋಟಿ ರೂಪಾಯಿ ಒಟ್ಟು ಮಾಡಿದ್ರು.

ಯೋಗೇಶ್ ಚಿತಾಡೆ ಮಾಜಿ ವಾಯುಸೇನೆಯ ಅಧಿಕಾರಿಯಾಗಿದ್ದಾರೆ. ಇನ್ನು ಅವರ ಪತ್ನಿ ಸುಮೇದಾ ಚಿತಾಡೆ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪುತ್ರ ಭಾರತದ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗೇಶ್ ದಂಪತಿ ಇದಕ್ಕೆ ಬೇಕಾದ ಯಂತ್ರವನ್ನು ಜರ್ಮನಿಯ ಕಂಪನಿಯೊಂದರಿಂದ ತರಿಸಿಕೊಂಡಿದ್ದರು. ಅಕ್ಟೋಬರ್ 4ರಂದು ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ ಕೂಡ ಮಾಡಲಾಗಿತ್ತು.

Contact Us for Advertisement

Leave a Reply