ಗಡಿಯಲ್ಲಿ ಪಾಕ್ ಸೇನೆಯ ಡ್ರೋನ್ ನೆಲಕ್ಕುರುಳಿಸಿದ ಯೋಧರು..!

masthmagaa.com:

ಗಡಿಯಲ್ಲಿ ಕಾಲು ಕೆರೆದು ಪದೇಪದೆ ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ಪಾಠ ಕಲಿಸಿದೆ. ಜಮ್ಮು-ಕಾಶ್ಮೀರದ ಕೇರನ್​ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಬಳಿ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನ ಸೇನೆಯ ಡ್ರೋನ್​ವೊಂದನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಅಂದ್ಹಾಗೆ ಪಾಕ್​ನ ಈ ಡ್ರೋನ್​ ಅನ್ನು ಚೀನಾ ಮೂಲದ ಕಂಪನಿ ತಯಾರಿಸಿತ್ತು ಅನ್ನೋದು ಗೊತ್ತಾಗಿದೆ. DJI Mavic 2 Pro ಮಾಡೆಲ್​ನ ಡ್ರೋನ್ ಇದಾಗಿದೆ.

ಒಂದುಗಡೆ ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, ಇತ್ತ ಭಾರತ-ಪಾಕ್​ ಗಡಿಯಲ್ಲಿ ಚೀನಾ ಕಂಪನಿ ತಯಾರಿಸಿರುವ ಪಾಕಿಸ್ತಾನದ ಡ್ರೋನ್​ ಅನ್ನು ಭಾರತ ಹೊಡೆದು ಹಾಕಿದೆ. ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನವು ಡ್ರೋನ್ ಮೂಲಕ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಯತ್ನಿಸಿದ ಹಲವು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದೀಗ ಅಂತಹ ಡ್ರೋನ್​ನನ್ನೇ ಸೇನೆ ನೆಲಕ್ಕುರುಳಿಸಿದೆ.

-masthmagaa.com

Contact Us for Advertisement

Leave a Reply