ಭಾರತ ರಫ್ತು ದಾಖಲೆ! ಇದೇ ಮೊದಲ ಬಾರಿಗೆ 750 ಬಿಲಿಯನ್‌ ತಲುಪಿದ ಎಕ್ಸ್ಪೋರ್ಟ್‌!

masthmagaa.com:

ಇದೇ ಮೊದಲ ಬಾರಿಗೆ ಭಾರತದ ರಫ್ತು ಮೌಲ್ಯ ದಾಖಲೆಯ 750 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 61.5 ಲಕ್ಷ ಕೋಟಿ ರೂಪಾಯಿ ತಲುಪಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. 2021-22ರಲ್ಲಿ ದೇಶದ ರಫ್ತು 676 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 55.4 ಲಕ್ಷ ಕೋಟಿ ರೂಪಾಯಿ ಇತ್ತು. ಇದೀಗ ಅತ್ಯಂತ ವೇಗವಾಗಿ 750 ಬಿಲಿಯನ್‌ ಡಾಲರ್‌ಗೆ ತಲುಪಿದ್ದು, ಈ ವರ್ಷದ ಅಂತ್ಯದ ವೇಳೆಗೆ 760 ಬಿಲಿಯನ್‌ ಡಾಲರ್‌ಗೆ ತಲುಪುವ ಸಾಧ್ಯತೆಯಿದೆ ಅಂತ ಕೇಂದ್ರ ವಾಣಿಜ್ಯ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ. ಇತ್ತ ದೇಶದ ರಕ್ಷಣಾ ಕ್ಷೇತ್ರದ ರಫ್ತಿನಲ್ಲೂ ಕೂಡ ಸರ್ವಕಾಲಿಕ ಏರಿಕೆಯಾಗಿದೆ. 2022-23ರ ಸಾಲಿನಲ್ಲಿ 13 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ರಫ್ತು ದಾಖಲಾಗಿದೆ. ಭಾರತ ಪ್ರಪಂಚದಾದ್ಯಂತ 80ಕ್ಕೂ ಹೆಚ್ಚು ದೇಶಗಳಿಗ ರಕ್ಷಣಾ ಸಾಮಗ್ರಿಗಳನ್ನ ರಫ್ತು ಮಾಡ್ತಿದೆ ಅಂತ ತಿಳಿದು ಬಂದಿದೆ. ಅಧಿಕೃತ ಅಂಕಿ ಅಂಶದ ಪ್ರಕಾರ ಈ ರಫ್ತು ಪ್ರಮಾಣ 2015-16ರಲ್ಲಿ ಕೇವಲ 2 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಅದು 13 ಸಾವಿರ ಕೋಟಿ ತಲುಪಿದೆ.

-masthmagaa.com

Contact Us for Advertisement

Leave a Reply