ಯುಕ್ರೇನ್‌ನಿಂದ ಮತ್ತಷ್ಟು ಭಾರತೀಯರು ವಪಾಸ್

masthmagaa.com:

ಯುದ್ಧಭೂಮಿ ಯುಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆಪರೇಷನ್ ಗಂಗಾ ಮಿಷನ್​​ ವೇಗ ಪಡೆದುಕೊಂಡಿದೆ. ಇಂದು ನಸುಕಿನ ಜಾವ ರೊಮೇನಿಯಾದಿಂದಲೂ 250 ಮಂದಿಯನ್ನು ಹೊತ್ತ ವಿಮಾನ ಭಾರತಕ್ಕೆ ಬಂದಿದೆ. ಇದಾದ ಸ್ವಲ್ಪ ಹೊತ್ತಲ್ಲೇ 240 ಮಂದಿ ಪ್ರಯಾಣಿಕರಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನ ಹಂಗರಿಯ ರಾಜಧಾನಿ ಬುಡಾಪೆಸ್ಟ್​​ನಿಂದ ದೆಹಲಿಗೆ ಬಂದಿಳಿದಿದೆ. ನಿನ್ನೆ ಕೂಡ 219 ಮಂದಿ ಏರ್ ಇಂಡಿಯಾ ವಿಮಾನದಲ್ಲಿ ರೊಮೇನಿಯಾದಿಂದ ಮುಂಬೈಗೆ ಬಂದಿದ್ರು. ಇನ್ನು ಒಟ್ಟಾರೆಯಾಗಿ ಭಾರತಕ್ಕೆ ಬಂದ ವಿದ್ಯಾರ್ಥಿಗಳ ಪೈಕಿ 30 ಮಂದಿ ಕನ್ನಡಿಗರೂ ಸೇರಿದ್ದಾರೆ.

ಇನ್ನು ಕೂಡ ಸಾವಿರಾರು ಭಾರತೀಯ ನಾಗರಿಕರು, ವಿದ್ಯಾರ್ಥಿಗಳು ಯುಕ್ರೇನ್​ನಲ್ಲಿದ್ದಾರೆ. ಬಂಕರ್​​ಗಳಲ್ಲಿ, ಕಟ್ಟಡಗಳ ಬೇಸ್​​ಮೆಂಟ್​​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವರು ಆಹಾರದ ಸಮಸ್ಯೆ ಎದುರಿಸುತ್ತಿದ್ದು, ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಈ ನಡುವೆ ಪ್ರತಿಕ್ರಿಯಿಸಿರೋ ಯುಕ್ರೇನ್​ನಲ್ಲಿರೋ ಭಾರತದ ರಾಯಭಾರಿ ಕಚೇರಿ, ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದೀವಿ. ಅದ್ರಲ್ಲೂ ಪೂರ್ವ ಯುಕ್ರೇನ್​​​ ಪರಿಸ್ಥಿತಿ ಮತ್ತು ಅಲ್ಲಿರೋ ಭಾರತೀಯರ ನಾಗರಿಕರ ರಕ್ಷಣೆಗಾಗಿ ಸ್ಥಳೀಯ ಆಡಳಿತದೊಂದಿಗೆ ಟಚ್​ನಲ್ಲಿದ್ದೀವಿ.. ಇನ್ನು ಯಾರೆಲ್ಲಾ ಯುಕ್ರೇನ್​​ನಲ್ಲಿದ್ಧಾರೋ.. ಅವರ ಜೊತೆಗೆ ನಾವಿದ್ದೀವಿ.. ಹೆದರೋ ಅಗತ್ಯವಿಲ್ಲ ಅಂತ ಕೂಡ ತಿಳಿಸಿದೆ. ಜೊತೆಗೆ ಈಗಾಗಲೇ ರೊಮೇನಿಯಾ ಮತ್ತು ಹಂಗೇರಿಗೆ ಸ್ಥಳಾಂತರಿಸೋ ಪ್ರಕ್ರಿಯೆ ನಡೀತಾ ಇದೆ. ಅದೇ ರೀತಿ ಅಕ್ಕಪಕ್ಕದ ಉಳಿದ ದೇಶಗಳ ಜೊತೆಗೂ ಮಾತುಕತೆ ನಡೆಸಲಾಗ್ತಿದೆ ಅಂತ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply