masthmagaa.com:

ಇಂಗ್ಲೆಂಡ್​ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. 18 ಆಟಗಾರರ ಈ ತಂಡದಲ್ಲಿ ಸೂರ್ಯಕುಮಾರ್ ಯಾದವ್​, ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣಾ ಮತ್ತು ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಇದೇ ಮೊದಲ ಬಾರಿ ಸ್ಥಾನ ನೀಡಲಾಗಿದೆ. ಅಂದ್ರೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಇವರು ಸ್ಥಾನ ಪಡೆದ್ರೆ ಒಂಡೇ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದಂತಾಗುತ್ತೆ. ಉಳಿದಂತೆ ನಾಲ್ವರು ಸ್ಪಿನ್ನರ್ ಮತ್ತು ಐವರು ವೇಗಿಗಳು ಆಯ್ಕೆಯಾಗಿದ್ದಾರೆ. ಮಾರ್ಚ್​ 23, 26 ಮತ್ತು 28ರಂದು ಪುಣೆಯಲ್ಲಿ ಪಂದ್ಯಗಳು ನಡೆಯಲಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ.

18 ಆಟಗಾರರ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ)

ರೋಹಿತ್ ಶರ್ಮಾ (ಉಪನಾಯಕ)

ಶಿಖರ್ ಧವನ್

ಶುಬ್​ಮನ್​ ಗಿಲ್

ಶ್ರೇಯಸ್ ಐಯ್ಯರ್

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ರಿಷಬ್ ಪಂತ್ (ವಿಕೆಟ್​ ಕೀಪರ್)

ಕೆ.ಎಲ್. ರಾಹುಲ್ (ವಿಕೆಟ್ ಕೀಪರ್)

ಯಜುವೇಂದ್ರ ಚಹಲ್

ಕುಲ್ದೀಪ್ ಯಾದವ್

ಕೃನಾಲ್ ಪಾಂಡ್ಯ

ವಾಷಿಂಗ್ಟನ್ ಸುಂದರ್

ಟಿ. ನಟರಾಜನ್

ಭುವನೇಶ್ವರ್ ಕುಮಾರ್

ಮೊಹಮ್ಮದ್ ಸಿರಾಜ್

ಪ್ರಸಿಧ್ ಕೃಷ್ಣ

ಶಾರ್ದೂಲ್ ಠಾಕೂರ್

-masthmagaa.com

Contact Us for Advertisement

Leave a Reply