ಜವಹರ್‌ಲಾಲ್‌ ನೆಹರುರನ್ನ ಹಾಡಿ ಹೊಗಳಿದ ಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ!

masthmagaa.com:

ಭಾರತದ ಸ್ವಾತಂತ್ರ ದಿನಕ್ಕೆ ಶುಭಕೋರಿ ಮಾತನಾಡಿರೋ ಶ್ರೀಲಂಕಾದ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಭಾರತದ ಮಾಜಿ ಪ್ರಧಾನಿ ಜವಹಾರ್‌ಲಾಲ್‌ ನೆಹರು ಅವರ ಗುಣಗಾನ ಮಾಡಿದ್ದಾರೆ. ಭಾರತ ಇಂದು ಜಾಗತಿಕ ಶಕ್ತಿಯಾಗುವತ್ತ ಇಂದು ಬೆಳೀತಾ ಇದೆ. ಈ ಶತಮಾನದ ಮಧ್ಯಭಾಗದಲ್ಲಿ ನಾವು ಇರಲ್ಲ..ಆದ್ರೆ ಭಾರತ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಪಾತ್ರವನ್ನ ವಹಿಸುತ್ತದೆ. ಅದು ಪಂಡಿತ್‌ ಜವಾಹರ್‌ ಲಾಲ್‌ ನೆಹರುಗೆ ಭಾರತ ನೀಡ್ತಿರೋ ಗೌರವ ಅಂತ ಹೇಳಿದ್ದಾರೆ. ಜೊತೆಗೆ ಜವಾಹರ್‌ ಲಾಲ್‌ ನೆಹರು ಅವರ ಮಾತುಗಳಿಂದ ನಾನು ಪ್ರಭಾವಿತನಾಗಿದ್ದೇನೆ. ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾಗೆ ದೇಶದ ಸ್ಥಾನಮಾನವನ್ನ ಕೊಡಿಸೋಕೆ ಅದರಲ್ಲಿ ಸದಸ್ಯರಾಷ್ಟ್ರವಾಗಿ ಮಾಡೋಕೆ ಭಾರತದ ನೆಹರು ಅವರ ಪ್ರತಿನಿಧಿ ವಿಕೆ ಕೃಷ್ಣಮೆನನ್‌ ನಮ್ಮ ತಂದೆಯವರಿಗೆ ತುಂಬಾ ಸಹಾಯ ಮಾಡಿದ್ರು. ನನ್ನ ತಂದೆಗೆ ನೆಹರು ಕೂಡ ತುಂಬಾ ಚೆನ್ನಾಗಿ ಗೊತ್ತಿದ್ರು. ವಿಧ್ಯಾರ್ಥಿಯಾಗಿದ್ದಾಗ ಒಮ್ಮೆ ದಾರಿ ಮಧ್ಯೆ ನೆಹರುರನ್ನ ದೂರದಿಂದ ನೋಡಿದ್ದೆ ಅಂತ ಹೇಳಿದ್ದಾರೆ. ಇನ್ನು ಭಾರತ ವಿಮಾನ ಗಿಫ್ಟ್‌ ಕೊಟ್ಟಿರೋ ಬಗ್ಗೆ ಮಾತನಾಡಿರೋ ರಾನಿಲ್‌ ಇದು ಭಾರತ ಹಾಗೂ ಶ್ರೀಲಂಕಾದ ಸಹಕಾರವನ್ನ ತೋರಿಸುತ್ತೆ. ನಮ್ಮ ಸೇನೆಗೆ ಬಲ ತುಂಬುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply